ಶಹಾಪುರ: ‘ವಕೀಲರ ಸಂರಕ್ಷಣೆ ಕಾಯ್ದೆ -2024ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು. ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ ರದ್ದುಪಡಿಸಬೇಕು. ಕಿರಿಯ ವಕೀಲರಿಗೆ ಎರಡು ವರ್ಷ ಕಾಲ ತಿಂಗಳಿಗೆ ₹10ಸಾವಿರ ಸಹಾಯಧನ ನೀಡಬೇಕು. ತಾಲ್ಲೂಕು ವಕೀಲರ ಸಂಘಕ್ಕೆ ₹5ಲಕ್ಷ ಅನುದಾನ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿ ಶುಕ್ರವಾರ ಅಖಿಲ ಭಾರತ ವಕೀಲರ ಒಕ್ಕೂಟದ (ಎಐಎಲ್‌ಯು) ಶಹಾಪುರ ಘಟಕದ ಸದಸ್ಯರು ಶುಕ್ರವಾರ ವಕೀಲರ ಸಹಿ ಸಂಗ್ರಹಣೆ ನಡೆಯಿತು.
ನಂತರ ಎಐಎಲ್‌ಯು ಜಿಲ್ಲಾ ಘಟಕದ ಸಂಚಾಲಕ ಆರ್.ಚೆನ್ನಬಸ್ಸು ವನದುರ್ಗ ಮಾತನಾಡಿ, ‘ರಾಜ್ಯ ವಕೀಲರ ಪರಿಷತ್ತಿನ ಕಚೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಬೇಕಾಗಿದೆ. ವಕೀಲರ ಸಂಘದ ಹಾಗೂ ಪರಿಷತ್ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ 33ರಷ್ಟು ಮೀಸಲಾತಿ ನೀಡಬೇಕು. ಅಲ್ಲದೆ ಪರಿಶಿಷ್ಟರಿಗೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರ ಪ್ರತಿನಿತ್ಯ ನೀಡಬೇಕು. ನ್ಯಾಯಾಲಯದ ಎಲ್ಲಾ ನ್ಯಾಯಾಲಯಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.
ಎಐಎಲ್‌ಯು ರಾಜ್ಯ ಸಮಿತಿ ಸದಸ್ಯ ಜೈಲಾಲ ತೋಟದಮನೆ, ತಾಲ್ಲೂಕು ಘಟಕದ ಸಂಚಾಲಕ ಸಯ್ಯದ್ ಇಬ್ರಾಹಿಂಸಾಬ್ ಜಮಾದಾರ ಹಾಗೂ ವಕೀಲರಾದ ಯೂಸೂಫ್ ಸಿದ್ದಕಿ, ಮಲ್ಲಿಕಾರ್ಜುನ ಬುಕ್ಕಲ್, ವಾಸುದೇವ ಕಟ್ಟಿಮನಿ, ಸತ್ಯಮ್ಮ ಹೊಸಮನಿ, ಸಂತೋಷ ಸತ್ಯಂಪೇಟೆ, ರಾಜೇಂದ್ರಕುಮಾರ ಸಾಗರ, ಕಿರಣಕುಮಾರ, ಭೀಮಣ್ಣ ನಾಯಕ, ಜಯಚಂದ್ರ ಬಸವಂತ ಠಾಕೂರ, ಸಿದ್ದರಾಮಪ್ಪ ಸನ್ನತಿ, ಶಿವಶೇಖರಪ್ಪ, ಸುರೇಶ, ರಾಮಕೃಷ್ಣ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.