ADVERTISEMENT

ಸುರಪುರದ ಪ್ರಭು ಕಾಲೇಜಿನಲ್ಲಿ ಹೃದಯಾಘಾತದಿಂದ ಚುನಾವಣಾ ಸಿಬ್ಬಂದಿ ಸಾವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 10:59 IST
Last Updated 22 ಏಪ್ರಿಲ್ 2019, 10:59 IST
   

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರದ ಪ್ರಭು ಕಾಲೇಜಿನಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯದಲ್ಲಿ ತೊಡಗಿದ್ದ ಚುನಾವಣಾ ಸಿಬ್ಬಂದಿ ಶಿವಪುತ್ರಪ್ಪ ಸಂಗಪ್ಪ ಕೋಡ್ಲಾ (45) ಹೃದಯಾಘಾತದಿಂದ ನಿಧನರಾದರು.

ತೀವ್ರ ಎದೆ ನೋವು ಕಾಣಿಸಿಕೊಂಡಿದ್ದರಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು.

ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಶಿವಪುತ್ರಪ್ಪ ಅವರು ಶಹಾಪುರ ತಾಲ್ಲೂಕಿನ ಹಳಿಸಗರ ಸಕಾ೯ರಿ ಉದು೯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.