ADVERTISEMENT

ತೂಕ ಮಾಡಿಸದೆ ಮರಳು ಸಾಗಿಸಿದರೆ ಕ್ರಮ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 14:46 IST
Last Updated 21 ಡಿಸೆಂಬರ್ 2018, 14:46 IST
ಯಾದಗಿರಿ ಜಿಲ್ಲೆ, ಸುರಪುರದ ಬಳಿ ಶೆಳ್ಳಗಿ ಚೆಕ್‌ಪೋಸ್ಟ್‌ ನಲ್ಲಿ ಮರಳು ಸಾಗಣೆ ವಾಹನಗಳನ್ನು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಪಾಸಣೆ ನಡೆಸಿದರು
ಯಾದಗಿರಿ ಜಿಲ್ಲೆ, ಸುರಪುರದ ಬಳಿ ಶೆಳ್ಳಗಿ ಚೆಕ್‌ಪೋಸ್ಟ್‌ ನಲ್ಲಿ ಮರಳು ಸಾಗಣೆ ವಾಹನಗಳನ್ನು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಪಾಸಣೆ ನಡೆಸಿದರು   

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಶೆಳ್ಳಗಿ ಚೆಕ್‌ಪೋಸ್ಟ್‌ನಲ್ಲಿ ಮರಳು ಸಾಗಣೆ ಮಾಡುತ್ತಿದ್ದ ಎರಡು ವಾಹನಗಳನ್ನು ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಶೆಳ್ಳಗಿ ಗ್ರಾಮದ ಚೆಕ್‌ಪೋಸ್ಟ್‌ಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ, ವಾಹನಗಳ ತಪಾಸಣೆ ನಡೆಸಿದರು.

ಎರಡು ವಾಹನಗಳಲ್ಲಿ ರಾಜಧನ ಪಾವತಿಸಿದ ರಸೀದಿ ಇತ್ತು. ಆದರೆ, ಕೆಎ33ಎ-8205 ಸಂಖ್ಯೆಯ ವಾಹನದಲ್ಲಿ ವ್ಹೇ ಬ್ರಿಡ್ಜ್‌ನಲ್ಲಿ ತೂಕ ಮಾಡಿಸಿದ ರಸೀದಿ ಹಾಗೂ ಜಿಪಿಎಸ್ ಸೌಲಭ್ಯ ಇರಲಿಲ್ಲ. ಮತ್ತೊಂದು ಕೆಎ33 ಎ-8435 ಸಂಖ್ಯೆಯ ವಾಹನದಲ್ಲಿ ವ್ಹೇ ಬ್ರಿಡ್ಜ್‌ನಲ್ಲಿ ತೂಕ ಮಾಡಿಸಿದ ರಸೀದಿ ಇರಲಿಲ್ಲ. ಹಾಗಾಗಿ, ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ತಹಶೀಲ್ದಾರ್ ಸುರೇಶ ಅಂಕಲಗಿ ಅವರಿಗೆ ನಿರ್ದೇಶನ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.