ADVERTISEMENT

ಉತ್ತಮ ಒಡನಾಡಿಯಾಗಿದ್ದ ಮರಿಗೌಡ: ಸಚಿವ ಶರಣಬಸಪ್ಪ

ಮರಿಗೌಡ ಪಾಟೀಲ ಹುಲ್ಕಲ್ ಪುಣ್ಯಸ್ಮರಣೆ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:56 IST
Last Updated 24 ಜುಲೈ 2025, 5:56 IST
ಶಹಾಪುರದ ಆರಬೋಳ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಮರಿಗೌಡ ಪಾಟೀಲ ಹುಲ್ಕಲ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು
ಶಹಾಪುರದ ಆರಬೋಳ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಮರಿಗೌಡ ಪಾಟೀಲ ಹುಲ್ಕಲ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು   

ಶಹಾಪುರ: ‘ಮರಿಗೌಡ ಪಾಟೀಲ ಹುಲ್ಕಲ್ ಅವರು ಸದಾ ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದರು. ಹೃದಯ ಶ್ರೀಮಂತಿಕೆ ಹೊಂದಿದ ವ್ಯಕ್ತಿಯಾಗಿದ್ದರು. ಸ್ಥಾನಮಾನಕ್ಕೆ ಆಸೆಪಡಲಿಲ್ಲ. ನನ್ನ ಒಡನಾಡಿಯಾಗಿ ಹೆಗಲು ನೀಡಿ ಜೊತೆಗಿದ್ದ ಅವರ ಅಗಲಿಕೆಯ ನೋವು ಇನ್ನೂ ಕಾಡುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಮರಿಗೌಡ ಪಾಟೀಲ ಹುಲ್ಕಲ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮತ್ತು ಕೃಷ್ಣಾ ಕಾಡಾ ಅಧ್ಯಕ್ಷರಾಗಿ ತಮ್ಮ ದಿಟ್ಟ ನಿಲುವಿನಿಂದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರೂ ಎಲ್ಲೂ ಅಹಂಕಾರ ತೋರಿಸಿಕೊಳ್ಳದ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ಬದುಕು ಪ್ರತಿಯೊಬ್ಬರಿಗೂ ಮಾದರಿಯಾಗಿದೆ’ ಎಂದರು.

ADVERTISEMENT

ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಬೀರದೇವರು, ಶಿವಲಿಂಗ ಶರಣ, ಕೆಂಚಪ್ಪ ಪೂಜಾರಿ ಮಾಳಹಳ್ಳಿ, ಸಿದ್ದರಾಮಯ್ಯಸ್ವಾಮಿ ನಾಗನಟಿಗಿ, ಬಸವರಾಜ ಪೂಜಾರಿ ಕೆಂಭಾವಿ ಸಾನ್ನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸಲಾದಪುರ, ಅಮರೇಶಗೌಡ ದರ್ಶನಾಪುರ, ಚಂದ್ರಶೇಖರ ಆರಬೋಳ, ಸಾಹಿತಿ ಸಿದ್ದರಾಮ ಹೊನ್ಕಲ್, ಹನುಮೇಗೌಡ ಮರಕಲ್, ಶಿವು ಮಹಾಂತಪ್ಪ ಚಂದಾಪುರ, ಹಣಮಂತರಾಯ ದೊರೆ ದಳಪತಿ, ಶರಣು ಗದ್ದುಗೆ, ವಿನೋದ ಪಾಟೀಲ, ಸಿದ್ದಣಗೌಡ ಕಾಡಂನ್ಮೂರ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಮಾನಸಿಂಗ್ ಚವ್ಹಾಣ, ಮಲ್ಲಣ್ಣ ಐಕೂರ, ಮಹಾದೇವ ಸಾಲಿಮನಿ ಹಾಜರಿದ್ದರು.

ಇದೇ ವೇಳೆ 66 ಯುವಕರು ರಕ್ತದಾನ ಮಾಡಿದರು.

ಹುಟ್ಟು-ಸಾವಿನ ಮಧ್ಯೆ ಸಾರ್ಥಕ ಜೀವನ ಸಾಗಿಸಬೇಕು. ಉತ್ತಮ ಜೀವನ ಸಾಗಿಸಿದ ಮರಿಗೌಡ ಪಾಟೀಲ ಹುಲ್ಕಲ್ ಅವರ ಆದರ್ಶವನ್ನು ಕ್ಷೇತ್ರದ ಯುವ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು
ಆರ್.ಚೆನ್ನಬಸ್ಸು ವನದುರ್ಗ ಹಿರಿಯ ಕಾಂಗ್ರೆಸ್ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.