ADVERTISEMENT

ಕಕ್ಕೇರಾ: ₹1.6 ಕೋಟಿ ಮೌಲ್ಯದ ಗಾಂಜಾ ವಶ

122 ಕೆಜಿ ಗಾಂಜಾ ಜಪ್ತಿ, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 5:36 IST
Last Updated 31 ಆಗಸ್ಟ್ 2022, 5:36 IST
ಕಕ್ಕೇರಾ ಪಟ್ಟಣದ ಗೊಲಪಲ್ಲೇರದೊಡ್ಡಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ₹1.6 ಕೋಟಿ ಮೌಲ್ಯದ ಗಾಂಜಾ ಸಮೇತ ಬಂಧಿಸಲಾಗಿದೆ
ಕಕ್ಕೇರಾ ಪಟ್ಟಣದ ಗೊಲಪಲ್ಲೇರದೊಡ್ಡಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ₹1.6 ಕೋಟಿ ಮೌಲ್ಯದ ಗಾಂಜಾ ಸಮೇತ ಬಂಧಿಸಲಾಗಿದೆ   

ಕಕ್ಕೇರಾ (ಯಾದಗಿರಿ ಜಿಲ್ಲೆ):ಪಟ್ಟಣದ ಗೊಲಪಲ್ಲೇರದೊಡ್ಡಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ₹1.6 ಕೋಟಿ ಮೌಲ್ಯದ ಗಾಂಜಾ ಸಮೇತ ಆರೋಪಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.

ಗೊಲಪಲ್ಲೇರದೊಡ್ಡಿಯ ನಿವಾಸಿ ಹನಮಂತ ದೇವೀಂದ್ರಪ್ಪ ಗೋನಾಟ್ಲ ಬಂಧಿತ ವ್ಯಕ್ತಿ. 76 ಕೆಜಿ ಒಣ ಗಾಂಜಾ, ಜಮೀನಿನಲ್ಲಿ ಬೆಳೆದ 46 ಕೆಜಿ ಹಸಿ ಗಾಂಜಾ ಸೇರಿದಂತೆ 122 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ADVERTISEMENT

ಹುಣಸಗಿ ತಾಲ್ಲೂಕಿನ ಕೋಡೆಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾರ್ಗದರ್ಶನದಲ್ಲಿಡಿವೈಎಸ್‌ಪಿ ಡಿ.ಮಂಜುನಾಥ ನೇತೃತ್ವದಲ್ಲಿದಾಳಿ ನಡೆಸಿದ್ದಾರೆ. ಹುಣಸಗಿ ವೃತ್ತ ಸಿಪಿಐ ಎಂ.ಬಿ.ಚಿಕ್ಕಣ್ಣನವರ್, ಸುರ‍‍ಪುರ ಪಿಐ ಸುನಿಲ್‌ ಮೂಲಿಮನಿ, ಕೊಡೇಕಲ್ ಪಿಎಸ್ಐ ಶ್ರೀಶೈಲ್ ಅಂಬಾಟೆ, ಎಎಸ್ಐಗಳಾದ ಮಧುನಾಯಕ, ಮಡಿವಾಳಪ್ಪ, ಬಸವನಗೌಡ, ಸಿಬ್ಬಂದಿ ಪರಮಾನಂದ, ಬಸವರಾಜ, ಪ್ರಭುಗೌಡ, ಅಯೂಬಖಾನ್, ಇಮಾಮಸಾಬ್‌, ಶಾಂತಪ್ಪ, ರಾಜೇಸಾಬ್, ಬಸವರಾಜ ಜಾಲಹಳ್ಳಿ, ಬಸಟೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.