ADVERTISEMENT

ಕೊರೊನಾ: ಗ್ರಾಮಗಳತ್ತ ವಲಸೆ ಕಾರ್ಮಿಕರು

ಮಲ್ಲಿಕಾರ್ಜುನ ಅರಿಕೇರಕರ್
Published 21 ಏಪ್ರಿಲ್ 2021, 5:40 IST
Last Updated 21 ಏಪ್ರಿಲ್ 2021, 5:40 IST
ಸೈದಾಪುರ ರೈಲು ನಿಲ್ದಾಣಲ್ಲಿ ಕಂಡು ಬಂದ ದೃಶ್ಯ
ಸೈದಾಪುರ ರೈಲು ನಿಲ್ದಾಣಲ್ಲಿ ಕಂಡು ಬಂದ ದೃಶ್ಯ   

ಸೈದಾಪುರ: ಕೊರೊನಾ ಸೋಂಕು ಹೆಚ್ಚು ಹರಡುತ್ತಿರುವ ಕಾರಣ ಮುಂಬೈ, ಬೆಂಗಳೂರು, ಪುಣೆ, ಹೈದರಾಬಾದ್ ಸೇರಿದಂತೆ ವಿವಿಧ ಮಹಾನಗರಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು ಗ್ರಾಮಗಳಿಗೆ ಹಿಂದುರುಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಲಾಕ್‌ಡೌನ್ ಸಡಿಲಿಕೆಯಾಗಿದ್ದರಿಂದ ಕಾರ್ಮಿಕರು ಗುಳೆ ಹೋಗಿದ್ದರು. ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ಹಲವೆಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದರಿಂದ ಮತ್ತೆ ಲಾಕ್‌ಡೌನ್ ಆಗಬಹುದು ಎಂಬ ಭೀತಿಯಿಂದ ಜನರು ಮರಳಿ ಬರುತ್ತಿದ್ದಾರೆ.

ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಯಾವುದೇ ರೀತಿಯ ತಪಾಸಣೆ ನಡೆಯದ ಕಾರಣ ವಲಸೆ ಕಾರ್ಮಿಕರಿಂದ ಸೋಂಕು ಹೆಚ್ಚು ಹರಡುವ ಭಯ ಜನರಲ್ಲಿ ಕಾಡುತ್ತಿದೆ. 40 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೈದಾಪುರದಲ್ಲಿ ಜ್ವರ ತಪಾಸಣೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ADVERTISEMENT

ರೈಲು, ಬಸ್‌ಗಳ ಮುಖಾಂತರ ಸಾವಿರಾರು ಜನರು ಪಟ್ಟಣಕ್ಕೆ ಆಗಮಿಸುತ್ತಿದ್ದು, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕರವೇ ತಾಲ್ಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಬಸವರಾಜ ನಾಯಕ ಒತ್ತಾಯಿಸಿದ್ದಾರೆ.

ಪಟ್ಟಣಕ್ಕೆ ನೇರವಾಗಿ ಬರುವ ವರು ಯಾವುದೇ ರೀತಿಯ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು. ಕುಟುಂಬದ ಸದಸ್ಯರಿಂದ ದೂರವಿರಬೇಕು. ಸೋಂಕು ಲಕ್ಷಣಗಳು ಕಂಡು ಬಂದರೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಕಂದಾಯ ನಿರೀಕ್ಷಕ ಮುಸ್ತಾಫ್ ಮನವಿ ಮಾಡಿದ್ದಾರೆ.

*ಸೈದಾಪುರ ರೈಲು ನಿಲ್ದಾಣದಲ್ಲಿ ಹೆಚ್ಚು ರೈಲುಗಳು ನಿಲ್ಲುವ ಕುರಿತು ಮಾಹಿತಿ ಇರಲಿಲ್ಲ. ಕೆಲವೇ ದಿನಗಳಲ್ಲಿ ಅಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ತೆರೆಯುತ್ತೇವೆ<

– ಡಾ.ಇಂದುಮತಿ ಪಾಟೀಲ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.