ADVERTISEMENT

ಮೈಲಾರಲಿಂಗೇಶ್ವರ ನವರಾತ್ರಿ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 14:13 IST
Last Updated 12 ಅಕ್ಟೋಬರ್ 2019, 14:13 IST
ವಡಗೇರಾ ತಾಲ್ಲೂಕಿನ ಕುರುಕುಂದಾ ಗ್ರಾಮದ ಆರಾಧ್ಯ ದೈವ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರೆ ವಿಜೃಂಭಣೆಯಿಂದ ಜರುಗಿತು
ವಡಗೇರಾ ತಾಲ್ಲೂಕಿನ ಕುರುಕುಂದಾ ಗ್ರಾಮದ ಆರಾಧ್ಯ ದೈವ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರೆ ವಿಜೃಂಭಣೆಯಿಂದ ಜರುಗಿತು   

ಯಾದಗಿರಿ: ವಡಗೇರಾ ತಾಲ್ಲೂಕಿನ ಕುರುಕುಂದಾ ಗ್ರಾಮದ ಆರಾಧ್ಯ ದೈವ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರೆ ನವರಾತ್ರಿ ಸಂದರ್ಭದಲ್ಲಿ ವೈಭವದಿಂದ ಜರುಗಿತು.

ನವರಾತ್ರಿಯ 9 ದಿನಗಳು ವಿವಿಧ ಕಾರ್ಯಕ್ರಮಗಳು ನಡೆಯಿತು.ವಿಜಯ ದಶಮಿಯಂದು ಬನ್ನಿ ಮಹಾಂಕಾಳಿಯ ಶಮಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.

10 ರಂದು ಬೆಳಗ್ಗೆ 5.30ಕ್ಕೆ ಸರಪಳಿ ಪವಾಡ ಬೆಳಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಸಕಲ ವಾದ್ಯ ವೈಭವಗಳ ಮದ್ಯೆ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು.

ADVERTISEMENT

ನಂತರ ಹೇಳೀಕೆ ನೀಡಿದ ಪೂಜಾರಿ ನಾಗಪ್ಪ ’ಹವಳ ಮುತ್ತು ನಾಮುಂದ ನೀಮುಂದ ಅಂತಾವ; ಭಕ್ತಿ ಇಟ್ಟು ನಡೆದವರಿಗೆ ಬೇಡಿದ್ದು ಕೊಡತಾನ ನಮ್ಮ ಮೈಲಾರಲಿಂಗೇಶ್ವರ’ ಎಂದು ಹೇಳಿಕೆ ನೀಡಿದರು.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರುಅಪಾರ ಸಂಖ್ಯೆಯಲ್ಲಿ ನೆರೆದು ದರ್ಶನಾಶೀರ್ವಾದ ಪಡೆದರು.

ಪಟ್ಟದ ಪೂಜಾರಿ ಶರಣಪ್ಪ, ನಾಗಪ್ಪ, ಪ್ರಮುಖರಾದ ಶರಣಪ್ಪಗೌಡ, ಈರಣ್ಣಗೌಡ ಪಾಟೀಲ, ಬಸವರಾಜಪ್ಪಗೌಡ, ಮಾಣಿಕರೆಡ್ಡಿ ಕುರಕುಂದಿ, ಗೌಡಪ್ಪಗೌಡ, ಅಂಬರೇಷಗೌಡ, ಸಿದ್ದಲಿಂಗರೆಡ್ಡಿ, ಶರಣಬಸವ, ಖಂಡಪ್ಪ ತತ್ತರೆಡ್ಡಿ, ಮಲ್ಲಪ್ಪ ಅವ್ವಣ್ಣವರ್ ಹಾಗೂ ಬಾವೂರ್, ಹಲಗಿ ಕೊಂಬಿನ ಕುಟುಂಬದ ಸೇವಕರು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.