ADVERTISEMENT

‘ದೇಶದ ಏಕತೆಯ ಪ್ರತೀಕ ಪಟೇಲ್‌’

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 12:40 IST
Last Updated 31 ಅಕ್ಟೋಬರ್ 2019, 12:40 IST
ಸೈದಾಪುರ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್ ಜಯಂತಿ ಪ್ರಯುಕ್ತ ರಾಷ್ಟ್ರೀಯ ಏಕತಾ ದಿವಸ ಆಚರಿಸಲಾಯಿತು
ಸೈದಾಪುರ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್ ಜಯಂತಿ ಪ್ರಯುಕ್ತ ರಾಷ್ಟ್ರೀಯ ಏಕತಾ ದಿವಸ ಆಚರಿಸಲಾಯಿತು   

ಸೈದಾಪುರ: ‘ಹರಿದು ಹಂಚಿಹೋದ ಭಾರತದ ಏಕತೆಗೆ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಶ್ರಮಿಸಿದರು’ ಎಂದು ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಘವೇಂದ್ರ ಬಾದಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಏಕತಾ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶ ಕಟ್ಟುವುದಕ್ಕಿಂತ ದೇಶವನ್ನು ಒಡೆಯುವವರೆ ಹೆಚ್ಚಾಗಿರುವ ಕಾಲಘಟ್ಟದಲ್ಲಿ ಪಟೇಲ್‌ ಮಾದರಿಯಾಗಿ ನಿಲ್ಲುತ್ತಾರೆ. ಅವರು ಅಖಂಡತೆಗಾಗಿಯೇ ತಮ್ಮ ಜೀವವನ್ನು ಮುಡುಪಾಗಿಟ್ಟರು ಎಂದರು.

ADVERTISEMENT

ಸತ್ಯನಿಷ್ಠೆಯಿಂದ ರಾಷ್ಟ್ರದ ಐಕ್ಯತೆ, ಅಖಂಡತೆ ಮತ್ತು ಸುರಕ್ಷಿತಯನ್ನು ಕಾಪಾಡಲು ಪ್ರತಿಯೊಬ್ಬರು ಸಮರ್ಪಿಸಿಕೊಳ್ಳಬೇಕು. ಪಟೇಲರ ದೂರದೃಷ್ಠಿ ಹಾಗೂ ಕಾರ್ಯಗಳ ಮೂಲಕ ಸಾಧ್ಯವಾಗಿಸಲ್ಪಟ್ಟ ದೇಶವನ್ನು ಕಾಪಾಡುವ ಕಾರ್ಯ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಶಿಕ್ಷಕ ಕಾಶಿನಾಥ ಶೆಟ್ಟಿಹಳ್ಳಿ ವಿದ್ಯಾರ್ಥಿಗಳಿಗೆ ಏಕತಾ ದಿವಸದ ಪ್ರತಿಜ್ಞೆ ಬೋಧಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ರಾಧ ಸಂಗೋಳಿ, ಬಿ.ಬಿ.ವಡವಟ್, ಕಾಸಿಂಬಿ ಐ ಕೊನಂಪಲ್ಲಿ , ಶೃತಿ ಬಿ ಗುಂಡಾಲ್, ಕಾಶಿನಾಥ ಶೆಟ್ಟಿಹಳ್ಳಿ, ಬಸಮ್ಮ ಮಾವಿನಹಳ್ಳಿ, ಜಿಂದಪ್ಪ ಮಡಿವಾಳ ಹಾಗೂ ಸುನೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.