ADVERTISEMENT

ಗುರುಮಠಕಲ್ | ದೇಶ, ರಾಷ್ಟ್ರ ಧ್ವಜಕ್ಕೆ ತಾಯಿ ಸ್ಥಾನ: ಲಲಿತಾ ಅನಪುರ

ಹರ್ ಘರ್ ತಿರಂಗಾ ಅಭಿಯಾನದ ಬೈಕ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 6:46 IST
Last Updated 12 ಆಗಸ್ಟ್ 2025, 6:46 IST
ಗುರುಮಠಕಲ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹರ್ ಘರ್ ತಿರಂಗಾ ಬೈಕ್ ರ್‍ಯಾಲಿಗೆ ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಚಾಲನೆ ನೀಡಿದರು
ಗುರುಮಠಕಲ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹರ್ ಘರ್ ತಿರಂಗಾ ಬೈಕ್ ರ್‍ಯಾಲಿಗೆ ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಚಾಲನೆ ನೀಡಿದರು   

ಗುರುಮಠಕಲ್: ದೇಶ ಮತ್ತು ದೇಶದ ಸಾರ್ವಭೌಮತೆ ಮತ್ತು ಸ್ವಾಭಿಮಾನ ಬಿಂಬಿಸುವ ರಾಷ್ಟ್ರ ಧ್ವಜ ಭಾವನಾತ್ಮಕ ಸಂಬಂಧ ಕಲ್ಪಿಸುತ್ತದೆ. ದೇಶ ಮತ್ತು ರಾಷ್ಟ್ರಧ್ವಜವನ್ನು ನಾವು ತಾಯಿಯ ಸ್ಥಾನದಲ್ಲಿಟ್ಟು ಗೌರವಿಸಬೇಕು’ ಎಂದು ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಹರ್ ಘರ್ ತಿರಂಗಾ ಅಭಿಯಾನದ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ಮನೆಯಲ್ಲೂ ಆಗಸ್ಟ್ 15ರಂದು ಬೆಳಿಗ್ಗೆ ತ್ರಿವರ್ಣ ಧ್ವಜಾರೋಹಣ ಮಾಡುವುದು ಮತ್ತು ಗೌರವ ಪೂರ್ವಕವಾಗಿ ಸಂಜೆ ವೇಳೆ ಅವರೋಹಣವೂ ಶಿಷ್ಟಾಚಾರದಂತೆ ನಡೆಸಬೇಕಿದೆ. ಜತೆಗೆ ಧ್ವಜವನ್ನು ಅತ್ಯಂತ ಗೌರವದಿಂದ ಮನೆಯಲ್ಲಿ ಸಂರಕ್ಷಿಸಿಡಬೇಕು. ಯಾವುದೇ ಕಾರಣಕ್ಕೂ ರಾಷ್ಟ್ರ ಧ್ವಜಕ್ಕೆ ಅಪಮಾನ ಆಗುವಂತೆ ಬಿಡಬೇಡಿ’ ಎಂದರು.

ADVERTISEMENT

ಪಟ್ಟಣದ ಪ್ರವಾಸಿ ಮಂದಿರದಿಂದ ಪಕ್ಷದ ಕಾರ್ಯಕರ್ತರು ಬೈಕ್‌ಗಳಿಗೆ ತ್ರಿವರ್ಣ ಧ್ವಜವನ್ನು ಅಳವಡಿಸಿ, ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡರು. ಪಟ್ಟಣದ ಪ್ರಮುಖ ಬಡಾವಣೆಗಳ ಮುಖ್ಯರಸ್ತೆಗಳ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಅವರ ಮೂರ್ತಿಗಳಿಗೆ ಹೂಮಾಲೆ ಹಾಕುವ ಮೂಲಕ ಬೈಕ್ ರ್‍ಯಾಲಿ ಪೂರ್ಣಗೊಂಡಿತು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗುರು ಕಾಮಾ, ನೀಲಪ್ಪ ಗುಳಿಗಿ, ಯುವ ಮೋರ್ಚಾ ಅಧ್ಯಕ್ಷ ಶ್ರೀಧರ, ಮಂಡಲ ಘಟಕದ ಅಧ್ಯಕ್ಷ ನರಸಿಂಹುಲು ನಿರೇಟಿ, ಕೆ.ದೇವದಾಸ, ವೆಂಕಟಪ್ಪ ಅವಾಂಗಪುರ, ಮಲ್ಲಿಕಾರ್ಜುನ ಹೊನಗೇರಾ, ಚಂದುಲಾಲ್ ಚೌದರಿ, ಜಗದೀಶ ಮೇಂಗಜಿ, ಮೌನೇಶ ಬೆಳಗೇರಾ, ವಿನಾಯಕರಾವ ಜನಾರ್ಧನ, ರಾಜೇಂದ್ರ ಕಲಾಲ್, ಮಲ್ಲೇಶಪ್ಪ ಬೇಲಿ, ರವೀಂದ್ರರೆಡ್ಡಿ ಪೋತುಲ್, ರಾಮುಲು, ಮರಿಲಿಂಗ, ಲಕ್ಷ್ಮಣ ಆಶನಾಳ, ಬಾಲಪ್ಪ, ಸುನೀಲ್ ಕಡೇಚೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.