ADVERTISEMENT

ನೀಟ್, ಜೆಇಇ ಕಿರು ಪರೀಕ್ಷೆ 15ರಂದು

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 16:32 IST
Last Updated 11 ಜೂನ್ 2025, 16:32 IST
ಮಲ್ಲಿಕಾರ್ಜುನ‌ ಮೇಟಿ
ಮಲ್ಲಿಕಾರ್ಜುನ‌ ಮೇಟಿ   

ಯಾದಗಿರಿ: ಪಿಯುಸಿ ಪಾಸಾದ ಜಿಲ್ಲೆಯ ವಿದ್ಯಾರ್ಥಿಗಳು ನೀಟ್, ಜೆಇಇನಲ್ಲಿ ಅರ್ಹತೆ ಪಡೆಯದೆ ಇದ್ದು, ಮತ್ತೊಂದು ಅವಕಾಶಕ್ಕಾಗಿ ಬೇರೆ ಕಡೆ ಹೋಗುವುದನ್ನು ತಪ್ಪಿಸಿ, ಅವರಿಗೆ ಇಲ್ಲಿಯೇ ಉತ್ತಮ ಬೋಧನೆ ನೀಡುವ ನಿಟ್ಟಿನಲ್ಲಿ ಡಿಡಿಯು ಸಂಸ್ಥೆಯು ಅನುಭವಿ ಬೋಧಕರಿಂದ ಸಂಸ್ಥೆಯ ಶಹಾಪುರದಲ್ಲಿನ ವಿಜ್ಞಾನ ಕಾಲೇಜಿನಲ್ಲಿ ಬೋಧನೆ ನೀಡಲು ಮುಂದಾಗಿದೆ ಎಂದು ಸಂಸ್ಥೆ ಆಡಳಿತಾಧಿಕಾರಿ ಮಲ್ಲಿಕಾರ್ಜುನ‌ ಮೇಟಿ ತಿಳಿಸಿದರು.

ಇದಕ್ಕಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಕಿರು ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಗರಿಷ್ಠ ಅಂಕಗಳನ್ನು ಪಡೆಯುವ ಸುಮಾರು 40 ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರವೇಶ ಪಡೆದವರಿಗೆ ವಸತಿನಿಲಯ ಮತ್ತು ಸಾರಿಗೆ ವ್ಯವಸ್ಥೆ ಇದ್ದು, ಆಯ್ಕೆಯ ಪ್ರವೇಶ ಪರೀಕ್ಷೆಯನ್ನು ಜೂನ್‌ 15ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ. ಒಟ್ಟು 720 ಅಂಕಗಳ ಪರೀಕ್ಷೆ ಇದಾಗಿರುತ್ತದೆ ಎಂದು ಹೇಳಿದರು.

ADVERTISEMENT

ಮೆರಿಟ್ ಪಟ್ಟಿ ತಯಾರಿಸಿ ಪ್ರವೇಶ ನೀಡಿ ಸಂಪೂರ್ಣ ಒಂದು ವರ್ಷ ತರಬೇತಿ ನೀಡಲಾಗುವುದು. ಹೆಚ್ಚಿನ‌ ಮಾಹಿತಿಗಾಗಿ ಶಹಾಪುರ ಡಿಡಿಯು ವಿಜ್ಞಾನ ಕಾಲೇಜಿನ ದೂರವಾಣಿ ಸಂಖ್ಯೆ 94829 07199 ಸಂಪರ್ಕಿಸಲು ಕೋರಿದರು.

ಪ್ರಾಚಾರ್ಯ ಗೋಪಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.