ADVERTISEMENT

ನೆರಡಗಂ: ಅದ್ಧೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 15:52 IST
Last Updated 29 ಮಾರ್ಚ್ 2024, 15:52 IST
ಯಾದಗಿರಿ ಸಮೀಪದ ನೇರಡಗಂ ಸಿದ್ಧಲಿಂಗೇಶ್ವರ ಸ್ವಾಮೀಜಿ ರಥೋತ್ಸವ ಶುಕ್ರವಾರ ಸಂಜೆ ಜರುಗಿತು
ಯಾದಗಿರಿ ಸಮೀಪದ ನೇರಡಗಂ ಸಿದ್ಧಲಿಂಗೇಶ್ವರ ಸ್ವಾಮೀಜಿ ರಥೋತ್ಸವ ಶುಕ್ರವಾರ ಸಂಜೆ ಜರುಗಿತು    

ಯಾದಗಿರಿ: ಮಠ-ಮಂದಿರಗಳಲ್ಲಿ ಜರುಗುವ ಜಾತ್ರಾ ಮಹೋತ್ಸವಗಳು ಹಿಂದೂ ಧಾರ್ಮಿಕ ಪರಂಪರೆಯ ಪ್ರತೀಕವಾಗಿವೆ ಎಂದು ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಇಲ್ಲಿಗೆ ಸಮೀಪದ ಕರ್ನಾಟಕ-ತೆಲಂಗಾಣ ರಾಜ್ಯಗಳ ಗಡಿಯಲ್ಲಿರುವ ನೇರಡಗಂ ಮಠದ ಸಿದ್ಧಲಿಂಗ ಸ್ವಾಮೀಜಿ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯಿಕ ಆಚರಣೆಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಯಿಸುವಲ್ಲಿ ಮಠ-ಮಂದಿರಗಳ ಕೊಡುಗೆ ಬಹುಮುಖ್ಯವಾಗಿದೆ ಎಂದರು.

ಜಾತ್ರೆಯ ನಿಮಿತ್ತ ಶ್ರೀಮಠವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದ ಭಕ್ತರು ರಥೋತ್ಸವಕ್ಕೆ ನೈಸರ್ಗಿಕ ಹೂಗಳಿಂದ ಅಲಂಕಾರ ಮಾಡಿದ್ದರು. ಜಾತ್ರೆಗೆ ಬಂದ ಎಲ್ಲಾ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು.

ADVERTISEMENT

ಜಾತ್ರೆಯಲ್ಲಿ ಪಾಲ್ಗೊಂಡ ಗಣ್ಯರು: ಸಿದ್ಧಲಿಂಗ ಸ್ವಾಮೀಜಿ ಸುವರ್ಣಗಿರಿ ವಿರಕ್ತ ಮಠ ವಳಬಳ್ಳಾರಿ, ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಶಂಭುಲಿಂಗ ಸ್ವಾಮೀಜಿ ಕಲ್ಲೂರು, ಶಿವಲಿಂಗ ಸ್ವಾಮೀಜಿ ಖೇಳಗಿ, ಅಭಿನವ ಚನ್ನಬಸವ ಸ್ವಾಮೀಜಿ ನಿಡಗುಂದಿ ಕೊಪ್ಪ, ಆದಿತ್ಯಪರ ಬಿಜ್ವಾರ, ಲಿಂಗಪ್ಪ ತಾತಾ ಗರ‍್ಲಪಲ್ಲಿ, ಸಿದ್ಧಲಿಂಗ ಸ್ವಾಮೀಜಿ ಕೆಂಪಿನಮಠ ಹೊಸಪೇಠ, ಶಿವಬಸವ ದೇವರು ಧಾರವಾಡ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಡಿ.ಕೆ.ಅರುಣಾ, ಮಾಜಿ ಶಾಸಕ ಚಿಟ್ಟೆಂ ರಾಮಮೋಹನರೆಡ್ಡಿ, ರಾಜುಲ ಆಶಿರೆಡ್ಡಿ, ಕಾಂಗ್ರೆಸ್ ಮುಖಂಡ ಸಿದ್ಧಾರ್ಥರೆಡ್ಡಿ, ಬಿಜೆಪಿ ಮುಖಂಡ ಕೊಂಡಯ್ಯ, ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ವೆನ್ನ ಈಶ್ವರಪ್ಪ, ಪ್ರೊ.ಮುರಳಿ ಮನೋಹರ, ಬಿಆರ್‌ಎಸ್ ಮುಖಂಡ ಶಿವರಾಜ ಪಾಟೀಲ ಗುರ್ಜಾಲ್, ಮುಕ್ತಾ ಶ್ರೀಶೈಲಂ, ಅಯ್ಯಪ್ಪ ಮರಿಕಲ್ ಸೇರಿದಂತೆ ಅಪಾರ ಭಕ್ತ ಸಮೂಹ ಅದ್ದೂರಿ ರಥೋತ್ಸವಕ್ಕೆ ಸಾಕ್ಷಿಯಾದರು.

ಪಂಚಮ ಸಿದ್ದಲಿಂಗ ಸ್ವಾಮೀಜಿ
ನೇರಡಗಂ ಶ್ರೀಮಠವು ಕರ್ನಾಟಕ ಮತ್ತು ತೆಲಂಗಣ ಉಭಯ ರಾಜ್ಯಗಳ ಭಕ್ತರ ಆಧ್ಯಾತ್ಮಿಕ ತಾಣವಾಗಿದೆ. ಮಠದಲ್ಲಿ ಅನಾಥಶ್ರಮ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶಿಕ್ಷಣ ಸಂಸ್ಥೆ ಗೋ ಶಾಲೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ನಿರಂತರವಾಗಿ ಸಾಗುತ್ತಿವೆ
ಪಂಚಮ ಸಿದ್ಧಲಿಂಗ ಸ್ವಾಮೀಜಿ ಪೀಠಾಧಿಪತಿ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ ನೇರಡಗಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.