ನಾರಾಯಣಪುರ: ನಾರಾಯಣಪುರ–ಹೈದರಾಬಾದ್ ಮಧ್ಯೆ ಬಸ್ ಸಂಚಾರ ಆರಂಭವಾಗಿದ್ದು, ಇಲ್ಲಿನ ಬಸ್ ನಿಲ್ದಾಣದಲ್ಲಿ ಗ್ರಾಮಸ್ಥರು ನೂತನ ಬಸ್‌ಗೆ ಪೂಜೆ ಸಲ್ಲಿಸಿದರು.
ಬಸ್ ನಾರಾಯಣಪುರದಿಂದ ಸಂಜೆ 7 ಗಂಟೆಗೆ ಹೊರಟು ಕೊಡೇಕಲ್ಲ, ಹುಣಸಗಿ, ಸುರಪುರ, ಯಾದಗಿರಿ ಮಾರ್ಗವಾಗಿ ಹೈದರಾಬಾದ್‌ಗೆ ಬೆಳಿಗ್ಗೆ 4 ಗಂಟೆಗೆ ತಲುಪುತ್ತದೆ. ಪುನಃ ಹೈದರಾಬಾದ್‌ದಿಂದ ಸಂಜೆ 6.30 ನಿಮಿಷಕ್ಕೆ ಬಿಟ್ಟು ಯಾದಗಿರಿ ಮಾರ್ಗದಿಂದ ನಾರಾಯಣಪುರಕ್ಕೆ ಬೆಳಗಿನ ಜಾವ 3.30ಕ್ಕೆ ತಲುಪಲಿದೆ ಎಂದು ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.
ಸಂಚಾರ ನಿಯಂತ್ರಕ ಅಶೋಕ ಶಾಬಾದಿ, ಚಾಲಕ ಗುರುರಾಜ, ನಿರ್ವಾಹಕ ಬಾಳಪ್ಪ, ಮಹಾಂತೇಶ ಪಾಟೀಲ, ಪ್ರಶಾಂತ ರಾಠಿ, ಸಂಗು ಕೆಂಡದ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.