ADVERTISEMENT

ಕೆಂಭಾವಿ | ನಕಲಿ ಬೇಡ ಜಂಗಮ ಪ್ರಮಾಣಪತ್ರ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 7:14 IST
Last Updated 21 ಜುಲೈ 2025, 7:14 IST
ಕೆಂಭಾವಿಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಉಪತಹಶೀಲ್ದಾರ್‌ ಪ್ರವೀಣಕುಮಾರ ಸಜ್ಜನ್ ಅವರಿಗೆ ಮನವಿ ಸಲ್ಲಿಸಲಾಯಿತು
ಕೆಂಭಾವಿಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಉಪತಹಶೀಲ್ದಾರ್‌ ಪ್ರವೀಣಕುಮಾರ ಸಜ್ಜನ್ ಅವರಿಗೆ ಮನವಿ ಸಲ್ಲಿಸಲಾಯಿತು   

ಕೆಂಭಾವಿ: ವಲಯದ ಹಲವು ಹಳ್ಳಿಗಳಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಕೆಲ ಜಾತಿ ಜನಾಂಗದವರು ಪರಿಶಿಷ್ಠ ಜಾತಿ ಬೇಡ ಜಂಗಮ ಪ್ರಮಾಣ ಪತ್ರ ಪಡೆಯುತ್ತಿದ್ದು, ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಆಗ್ರಹಿಸಿದೆ.

ಈ ಕುರಿತು ಸಂಘಟನೆಯ ವಲಯ ಘಟಕದ ಅಧ್ಯಕ್ಷ ಪರಶುರಾಮ ಬೋನಾಳ ಮಾತನಾಡಿ, ‘ಕೆಂಭಾವಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕೆಲ ಮೇಲ್ಜಾತಿ ಜನಾಂಗದವರು ಪರಿಶಿಷ್ಠ ಜಾತಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಕಂದಾಯ ಇಲಾಖೆಯ ಹಲವು ಅಧಿಕಾರಿಗಳೂ ಭಾಗಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಮಾಣಪತ್ರವನ್ನು ರದ್ದು ಮಾಡಿ ಮುಂದೆ ಈ ರೀತಿ ಆಗದಂತೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಉಪತಹಶೀಲ್ದಾರ್‌ ಪ್ರವೀಣಕುಮಾರ ಸಜ್ಜನ್ ಅವರಿಗೆ ಸಲ್ಲಿಸಲಾಯಿತು.

ADVERTISEMENT

ಪರಶುರಾಮ ಕಟ್ಟಿಮನಿ, ರವಿ ಮಾಳಳ್ಳಿಕರ್, ರಾಮು ಯಾಳಗಿ, ಸಿದ್ದಪ್ಪ ಮಾಳಳ್ಳಿ, ಸಾಯಬಣ್ಣ ಕೊಡಗಾನೂರ, ಸಮೀರ, ಬಸವರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.