ADVERTISEMENT

‘ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ’

ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್.ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 15:53 IST
Last Updated 6 ಆಗಸ್ಟ್ 2019, 15:53 IST
ಯಾದಗಿರಿಯ ಕೃಷಿ ಇಲಾಖೆ ಸಿಬ್ಬಂದಿ ರಸಗೊಬ್ಬರ ಗೋದಾಮಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿದರು
ಯಾದಗಿರಿಯ ಕೃಷಿ ಇಲಾಖೆ ಸಿಬ್ಬಂದಿ ರಸಗೊಬ್ಬರ ಗೋದಾಮಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿದರು   

ಯಾದಗಿರಿ: ‘2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಖಾಸಗಿ ಮತ್ತು ಸಹಕಾರಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಲಭ್ಯ ಇದೆ. ರಸಗೊಬ್ಬರದ ಕೊರತೆ ಇಲ್ಲ’ ಎಂದು ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ತಿಳಿಸಿದ್ದಾರೆ.

4,219 ಮೆಟ್ರಿಕ್ ಟನ್ ಯೂರಿಯಾ, 2,877 ಮೆಟ್ರಿಕ್ ಟನ್ ಡಿಎಪಿ, 1,500 ಮೆಟ್ರಿಕ್ ಟನ್ ಪೊಟ್ಯಾಷ್, 9,415 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಇದೆ. ಒಟ್ಟು 18,011 ಮೆಟ್ರಿಕ್ ಟನ್ ಸಂಗ್ರಹವಿದೆ. ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ಯೂರಿಯಾ ಲಭ್ಯವಿದೆ. ಮಾರಾಟಗಾರರು ಗೊಬ್ಬರ ಖರೀದಿಸುವ ರೈತರ ಮೇಲೆ ಒತ್ತಡ ಹೇರಬಾರದು’ ಎಂದು ತಿಳಿಸಿದ್ದಾರೆ.

‘ಗೊಬ್ಬರದ ಹರಳಿನ ಗಾತ್ರ ವ್ಯತ್ಯಾಸವಾದರೆ ಪೋಷಕಾಂಶಗಳ ಕೊರತೆ ಇರುವುದಿಲ್ಲ. ಬೇವು ಲೇಪಿತ ಯೂರಿಯಾ ಬಳಸುವುದರಿಂದ ಗೊಬ್ಬರದಲ್ಲಿನ ಸಾರಜನಕ ಅಂಶವು ಬೆಳೆಗಳ ಇಳುವರಿ ಹೆಚ್ಚಲು ಕಾರಣವಾಗುತ್ತದೆ’ ಎಂದರು.

ADVERTISEMENT

ಜಂಟಿ ಕೃಷಿ ನಿರ್ದೇಶಕ ಹಾಗೂ ಉಪ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ಜಿಲ್ಲೆಯ ವಿವಿಧ ಮಾರಾಟ ಕೇಂದ್ರಗಳಿಗೆ ಹಾಗೂ ರಾಜ್ಯ ಸರ್ಕಾರಿ ಮಾರಾಟ ಮಹಾಮಂಡಳ ಗೋದಾಮಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.