ADVERTISEMENT

10 ಸಾವಿರ ಜನರಿಗೆ ಲಸಿಕೆ ಹಾಕಿರುವೆ; ಚಿದಾನಂದಯ್ಯ ಹಿರೇಮಠ

​ಪ್ರಜಾವಾಣಿ ವಾರ್ತೆ
Published 12 ಮೇ 2021, 5:36 IST
Last Updated 12 ಮೇ 2021, 5:36 IST
11ಎಸ್ಎಚ್ಪಿ 1;ಚಿದಾನಂದಯ್ಯ ಹಿರೇಮಠ
11ಎಸ್ಎಚ್ಪಿ 1;ಚಿದಾನಂದಯ್ಯ ಹಿರೇಮಠ   

ಶಹಾಪುರ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 13 ವರ್ಷದಿಂದ ಶುಶ್ರೂಷಕ ಅಧಿಕಾರಿಯಾಗಿ ಕರ್ತವ್ಯ ನಿರ್ವಿಹಿಸುತ್ತಿರುವೆ. ಸೇವೆ ಸಲ್ಲಿಸುತ್ತಿರುವಾಗಲೇ ಕೊರೊನಾ ಸೋಂಕು ತಗುಲಿತು. ಸಂಪೂರ್ಣವಾಗಿ ಗುಣಮುಖನಾಗಿ ಕೆಲಸಕ್ಕೆ ಬಂದೆ. ಅಲ್ಲದೆ ತಾಲ್ಲೂಕು ಕೇಂದ್ರದಲ್ಲಿ ಮೊದಲ ಲಸಿಕೆ ಪಡೆದ ವ್ಯಕ್ತಿಯಾಗಿರುವೆ.

ಈಗ ಎರಡು ತಿಂಗಳಿಂದ ಕೋವಿಡ್ ಲಸಿಕೆಯನ್ನು ಸಾರ್ವಜನಿಕ ಆಸ್ಪತ್ರೆಗೆ ಆಗಮಿಸುವ ವ್ಯಕ್ತಿಗಳಿಗೆ ಡೋಸ್ ನೀಡುತ್ತಿರುವೆ. ಈಗ ಎರಡನೇಯ ಡೋಸ್ ಸಹ ಆರಂಭವಾಗಿದೆ. ಇಲ್ಲಿಯವರೆಗೆ 10 ಸಾವಿರ ಜನರಿಗೆ ಲಸಿಕೆ ಹಾಕಿರುವೆ. ಲಸಿಕೆ ಹಾಕಿಸಿಕೊಳ್ಳಲು ಬರುವ ವ್ಯಕ್ತಿಗಳು ಪ್ರಶ್ನೆಗಳ ಸುರಿಮಳೆಯನ್ನು ಹಾಕುತ್ತಾರೆ. ಅವರಿಗೆ ಸಮಾಧಾನದಿಂದ ಮನಸ್ಸಿಗೆ ನಾಟುವಂತೆ ಧೈರ್ಯ ಹೇಳುವುದರ ಜತೆಗೆ ಲಸಿಕೆ ಹಾಕಿಕೊಳ್ಳುವುದರಿಂದ ಆಗುವ ಆರೋಗ್ಯದ ಲಾಭದ ಬಗ್ಗೆ ವಿವರಿಸಿದಾಗ ಖುಷಿಯಿಂದ ಲಸಿಕೆ ಪಡೆದು ಮನೆಗೆ ತೆರಳುತ್ತಾರೆ. ಇದರಿಂದ ಜನ ಸೇವೆ ಮಾಡಿದ ಧನ್ಯತೆಯು ಮನದಲ್ಲಿ ಮೂಡಿದೆ.

ಮನೆಯಲ್ಲಿ ತುಂಬು ಸಂಸಾರವಿದೆ. ಮಗ, ಮಗಳು ಇದ್ದಾರೆ. ಕರ್ತವ್ಯದಿಂದ ಬಿಡುಗಡೆಯಾದ ಬಳಿ ಮನೆಗೆ ತೆರಳಿ ಸ್ನಾನ ಮಾಡಿದ ನಂತರ ಒಳಗಡೆ ಹೋಗುವೆ. ಈಗ ತುಂಬಾ ಒತ್ತಡದಲ್ಲಿ ಕೆಲಸ ನಿರ್ವಹಿಸುವಂತೆ ಆಗಿದೆ. ಮಾಸ್ಕ್ ಹಾಗೂ ಕೈಗವಸು ಹಾಕಿಕೊಳ್ಳುವರದಿಂದ ಒಮ್ಮೆಮ್ಮೆ ತುಂಬಾ ತೊಂದರೆಯಾಗುತ್ತದೆ. ಆದರೂ ಅನಿವಾರ್ಯವಾಗಿದೆ. ಇಂತಹ ಸಾಂಕ್ರಾಮಿಕ ರೋಗದ ವಿರುದ್ಧ ಜನಸೇವೆ ಮಾಡುವ ಅವಕಾಶ ಸಿಕ್ಕದೆ.ಪ್ರತಿಯೊಬ್ಬರು ಆಗಮಿಸಿ ಲಸಿಕೆ ಹಾಕಿಸಿಕೊಳ್ಳಬೇಕು

ADVERTISEMENT

ಚಿದಾನಂದಯ್ಯ ಹಿರೇಮಠ, ಶುಶ್ರೂಷಕ ಅಧಿಕಾರಿ,

ಶಹಾಪುರ ಸರ್ಕಾರಿ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.