ADVERTISEMENT

ಕಾರ್ಮಿಕರ ಹಕ್ಕೋತ್ತಾಯಕ್ಕಾಗಿ ಆನ್‌ಲೈನ್ ಮೂಲಕ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 16:29 IST
Last Updated 4 ಅಕ್ಟೋಬರ್ 2020, 16:29 IST
ಯಾದಗಿರಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗಳು, ಹಕ್ಕೊತ್ತಾಯಗಳ ಬಗ್ಗೆ ಆನ್‌ಲೈನ್ ಮೂಲಕ ಪ್ರತಿಭಟನೆ ನಡೆಯಿತು
ಯಾದಗಿರಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗಳು, ಹಕ್ಕೊತ್ತಾಯಗಳ ಬಗ್ಗೆ ಆನ್‌ಲೈನ್ ಮೂಲಕ ಪ್ರತಿಭಟನೆ ನಡೆಯಿತು   

ಯಾದಗಿರಿ: ‘ಅಖಿಲ ಭಾರತ ಪ್ರತಿಭಟನಾ ಸಪ್ತಾಹ’ದ ಭಾಗವಾಗಿ ವಲಸೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಆಲ್ ಇಂಡಿಯಾ ಮೈಗ್ರೆಂಟ್ ವರ್ಕರ್ಸ್ ಅಸೋಸಿಯೇಷನ್ (ಎಐಎಂಡ್ಲ್ಯೂಎ) ವತಿಯಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗಳು, ಹಕ್ಕೋತ್ತಾಯಗಳ ಬಗ್ಗೆ ಆನ್‌ಲೈನ್ ಮೂಲಕ ಪ್ರತಿಭಟನೆ
ನಡೆಯಿತು.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಲಸೆ ಕಾರ್ಮಿಕರು ನೆಲೆಸಿರುವ ಜಾಗಗಳಲ್ಲಿ ಎಐಯುಟಿಯುಸಿ ಸಂಯೋಜಿತ ಆಲ್ ಇಂಡಿಯಾ ಮೈಗ್ರೆಂಟ್ ವರ್ಕರ್ಸ್ ಅಸೋಸಿಯೇಷನ್ ವತಿಯಿಂದ ಹೊರ ರಾಜ್ಯಗಳಿಂದ ಬಂದಿರುವ ಹಾಗೂ ಬೇರೆ ಜಿಲ್ಲೆಗಳಿಂದ ವಲಸೆ ಬಂದು ನೆಲೆಸಿರುವ ಕಾರ್ಮಿಕರ ದಿನನಿತ್ಯ ಸಮಸ್ಯೆಗಳು, ಅವರ ಮುಂದಿರುವ ಸವಾಲುಗಳು ಹಾಗೂ ಬೇಡಿಕೆಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಬೇಕು. ಮುಖ್ಯವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಲಸೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಹಕ್ಕೋತ್ತಾಯಿಸಿ ಆನ್ ಲೈನ್ ಪ್ರತಿಭಟನಾ ಪ್ರದರ್ಶನಗಳ ಮೂಲಕ ಆಗ್ರಹಿಸಲಾಯಿತು.

ರಾಜ್ಯದ ಪರವಾಗಿ ಪ್ರಧಾನ ಮಂತ್ರಿಗೆ ವಲಸೆ ಕಾರ್ಮಿಕರ ಸಮಸ್ಯೆಗಳು, ಹಕ್ಕೋತ್ತಾಯಗಳುಳ್ಳ ಮನವಿ ಪತ್ರವನ್ನು ಕಳುಹಿಸಲಾಯಿತು.

ADVERTISEMENT

ಈ ಚಳವಳಿಯಲ್ಲಿ ಅಸೋಸಿಯೇಷನ್‍ನ ಸಂಚಾಲಕ ಕೆ. ಸೋಮಶೇಖರ್ ಯಾದಗಿರಿ, ಡಿ.ಉಮಾದೇವಿ, ಬಿ.ಎನ್‌. ರಾಮಲಿಂಗಪ್ಪ, ಶಾರದಾದೇವಿ, ನಿರ್ಮಲಾ, ದಾನಮ್ಮ, ಬೇಬಿ, ದೇವಮ್ಮ, ಪ್ರಮುಖ ಮುಖಂಡರು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಕಾರ್ಮಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.