ADVERTISEMENT

ಹೆಡಗಿಮದ್ರಾ ತಲುಪಿದ ಪಾದಯಾತ್ರೆ

ಗಂವ್ಹಾರದಿಂದ ಪ್ರಾರಂಭವಾದ ಪರಂಪರಾ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 4:14 IST
Last Updated 28 ಜುಲೈ 2022, 4:14 IST
ಪರಂಪರಾ ಪಾದಯಾತ್ರೆಯಲ್ಲಿ ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಸನ್ನತಿಯ ಚಂದ್ರಲಾಂಭ ದೇವಿ ದರ್ಶನ ಪಡೆದರು
ಪರಂಪರಾ ಪಾದಯಾತ್ರೆಯಲ್ಲಿ ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಸನ್ನತಿಯ ಚಂದ್ರಲಾಂಭ ದೇವಿ ದರ್ಶನ ಪಡೆದರು   

ಯಾದಗಿರಿ: ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪರಂಪರಾ ಪಾದಯಾತ್ರೆ ಹೆಡಗಿಮದ್ರಾದ ಶ್ರೀಶಾಂತ ಶಿವಯೋಗಿ ಮಠವನ್ನು ತಲುಪಿದೆ ಎಂದು ಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

ಗಂವ್ಹಾರದಿಂದ ಪ್ರಾರಂಭವಾದ ಪಾದಯಾತ್ರೆ ಸನ್ನತಿಯ ಚಂದ್ರಲಾಂಭ ದೇವಸ್ಥಾನವನ್ನು ತಲುಪಿ ಅಲ್ಲಿಯೇ ಪಾದಯಾತ್ರಿಗಳು ವಾಸ್ತವ್ಯ ಮಾಡಿದರು. ಬೆಳಿಗ್ಗೆ ಚಂದ್ರಲಾಂಭ ಪರಮೇಶ್ವರಿಗೆ ಗಂಗಾಧರ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿ ಎರಡನೇಯ ದಿನದ ಪಾದಯಾತ್ರೆ ಪ್ರಾರಂಭಿಸಿದರು.

ಕನಗಾನಹಳ್ಳಿ ಮಾರ್ಗವಾಗಿ ಹೊರಟು ಊಳವಂಡಗೇರಾ ಗ್ರಾಮವನ್ನು ತಲುಪಿದಾಗ ಅಲ್ಲಿನ ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿದರು. ಅಲ್ಲಿ ಏರ್ಪಡಿಸಿದ್ದ ಪ್ರಸಾದ ಪಾದಯಾತ್ರಿಗಳು ಸ್ವೀಕರಿಸಿ ಮುಂದೆ ಹೊರಟರು.

ADVERTISEMENT

ಅಲ್ಲಿಂದ ಮುಂದೆ ಸಾಗಿದ ಪಾದಯಾತ್ರೆ ಬನ್ನೆಟ್ಟಿ ಗ್ರಾಮವನ್ನು ತಲುಪಿತು. ನಂತರ ವಿಶ್ವಾರಾಧ್ಯರ ದರ್ಶನ ಕಟ್ಟೆಯಲ್ಲಿ ಶಿವಲಿಂಗಪ್ಪ ಸಾಹು ಕೂಡಿ ಫರಹತಾಬಾದ್ ಹಾಗೂ ಅವರ ಬಳಗದವರು ಏರ್ಪಡಿಸಿದ್ದ ಪ್ರಸಾದವನ್ನು ಎಲ್ಲ ಭಕ್ತರೊಂದಿಗೆ ಶ್ರೀಗಳು ಸೇವನೆ ಮಾಡಿದರು.

ಪಾದಯಾತ್ರೆ ತಳಕ ಗ್ರಾಮವನ್ನು ತಲುಪಿತು. ಅಲ್ಲಿ ಗ್ರಾಮದೇವತೆ ಹಾಗೂ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು. ತಳಕ ಗ್ರಾಮದ ಭಕ್ತರ ಪ್ರಸಾದ ಸ್ವೀಕರಿಸಿ ಪಾದಯಾತ್ರಿಗಳು ಹೆಡಗಿಮದ್ರಾ ಗ್ರಾಮ ತಲುಪಿದರು. ಅಲ್ಲಿ ಮಲ್ಲರೆಡ್ಡಪ್ಪ ಸಾಹು ಅರಿಕೇರಿ ಅವರ ಮನೆಯಲ್ಲಿ ಪಾದಯಾತ್ರಿಗಳು ಫಲಾಹಾರ ಸ್ವೀಕರಿಸಿ ಹಾಗೆ ಮುಂದೆ ಸಾಗಿ ಭೀಮರೆಡ್ಡಿ ಸಾಹುಕಾರ ಅವರು ಏರ್ಪಡಿಸಿದ ಪ್ರಸಾದವನ್ನು ಸ್ವೀಕರಿಸಿ ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠವನ್ನು ತಲುಪಿದರು. ಹೆಡಗಿಮದ್ರಾ ಮಠದಲ್ಲಿ ರಾತ್ರಿ ಇಡೀ ಭಜನೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಬಸವಂತಪುರದ ಶಿವು ಸಾಹುಕಾರ ಏರ್ಪಡಿಸುವ ಪ್ರಸಾದವನ್ನು ಸ್ವೀಕರಿಸುವ ಪಾದಯಾತ್ರಿಗಳು ಮಠದಲ್ಲಿ ವಾಸ್ತವ್ಯ ಮಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.