ADVERTISEMENT

ಗುರುಮಠಕಲ್ | ಮುಂದುವರಿದ ಅಕ್ಕಿ ತೂಕದ ಕಾರ್ಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 7:00 IST
Last Updated 8 ಸೆಪ್ಟೆಂಬರ್ 2025, 7:00 IST
ಅಕ್ಕಿ
ಅಕ್ಕಿ   

ಗುರುಮಠಕಲ್: ಪಟ್ಟಣದ ಎಸ್‌ಎಲ್‌ಟಿ ರೈಸ್‌ಮಿಲ್‌ನಲ್ಲಿ ಶುಕ್ರವಾರ ತಡರಾತ್ರಿ ಅಧಿಕಾರಿಗಳಿಂದ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಭಾನುವಾರವೂ ಪಡಿತರ ಅಕ್ಕಿಯ ತೂಕ ಮತ್ತು ಮೌಲ್ಯ ನಿರ್ಣಯದ ಕಾರ್ಯ ಮುಂದುವರೆದಿದೆ.

ಸ್ಥಳೀಯ ಕಾರ್ಮಿಕರು ಸಿಗದ ಕಾರಣ ಯಾದಗಿರಿ ನಗರದಿಂದ ಕಾರ್ಮಿಕರನ್ನು ಕರೆಸಿದ ಆಹಾರ ಇಲಾಖೆ ಅಧಿಕಾರಿಗಳು ಭಾನುವಾರ ತಡರಾತ್ರಿವರೆಗೂ ತೂಕದ ಕಾರ್ಯವನ್ನು ಮುಂದುವರೆಸಿದ್ದಾರೆ ಎಂದು ಆಹಾರ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.

ಸೋಮವಾರ ಮಧ್ಯಾಹ್ನದ ನಂತರ ತೂಕದ (ಮೌಲ್ಯ ನಿರ್ಣಯದ) ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಪಡಿತರ ಅಕ್ಕಿ, ನುಚ್ಚು ಪ್ರಮಾಣ ಕುರಿತು ಸ್ಪಷ್ಟತೆ ಸಿಕ್ಕ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.