ADVERTISEMENT

ಎಸ್‌ಡಿಪಿಐ ಕಾರ್ಯಕರ್ತರ ವಶಕ್ಕೆ: ಪೊಲೀಸ್ ಕಾರು ಅಡ್ಡಗಟ್ಟಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 6:28 IST
Last Updated 27 ಸೆಪ್ಟೆಂಬರ್ 2022, 6:28 IST
   

ಯಾದಗಿರಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ (ಎಸ್ ಡಿಪಿಐ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಶಹಾಪುರ ತಾಲ್ಲೂಕಿನ ಗೋಗಿಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪೊಲೀಸ್ ಠಾಣೆಯ ಗೇಟು ಬಳಿ ಜಮಾಯಿಸಿದ ಕಾರ್ಯಕರ್ತರು,ಪೊಲೀಸ್ ಕಾರು ಅಡ್ಡಗಟ್ಟಿಧಿಕ್ಕಾರ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲವೊತ್ತು ಕಾರು ಮುಂಭಾಗ ತಳ್ಳಾಟ, ನೂಕಾಟ ನಡೆಯಿತು. ನಂತರ ವಾಹನಕ್ಕೆ ದಾರಿ‌ ಮಾಡಿಕೊಡಲಾಯಿತು.

ADVERTISEMENT

ವಶಕ್ಕೆ ಪಡೆದವರ ಸಂಖ್ಯೆ ನಾಲ್ಕಕ್ಕೆ ಏರಿಕೆ
ಶಾಂತಿ ಕದಡುವ ಆರೋಪದ ಮೇಲೆ ಎಸ್ ಡಿಪಿಐ ಕಾರ್ಯಕರ್ತರನ್ನು ಗೋಗಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಎಸ್ ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಬಂದೇನವಾಜ ಗೋಗಿ, ಕಾರ್ಯಕರ್ತ
ಮಹಮ್ಮದ್ ಹಸೀಮ್ ಪಟೇಲ್ ಗೋಗಿ, ಪಿಎಫ್ ಐ ಮಾಜಿ ಜಿಲ್ಲಾಧ್ಯಕ್ಷ
ಮೊಹಮ್ಮದ್ ಮುನೀರ್ ಬಾಗ್ವಾನ್, ಮಹಮ್ಮದ್ ಮೆಹಬೂಬ್ ಎಂಬುವವರನ್ನು
ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.