ADVERTISEMENT

ಪಿತೃ ದೋಷ ನಿವಾರಣೆಗೆ ಪಿತೃ ಕಾರ್ಯ: ಪಂ.ರಾಘವೆಂದ್ರಾಚಾರ ಜೋಶಿ

ಸರ್ವಪಿತೃ ಮಹಾಲಯ ಅಮವಾಸ್ಯೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 6:01 IST
Last Updated 22 ಸೆಪ್ಟೆಂಬರ್ 2025, 6:01 IST
ಯಾದಗಿರಿ ನಗರದ ಉತ್ತರಾದಿ ಮಠದ ಪರಿಮಳ ಮಂಟಪದಲ್ಲಿ ಮಹಾಲಯ ಅಮಾವಾಸ್ಯೆ ಅಂಗವಾಗಿ ಭಾನುವಾರ ಪಿತೃಪಕ್ಷ ತರ್ಪಣ ನಡೆಯಿತು
ಯಾದಗಿರಿ ನಗರದ ಉತ್ತರಾದಿ ಮಠದ ಪರಿಮಳ ಮಂಟಪದಲ್ಲಿ ಮಹಾಲಯ ಅಮಾವಾಸ್ಯೆ ಅಂಗವಾಗಿ ಭಾನುವಾರ ಪಿತೃಪಕ್ಷ ತರ್ಪಣ ನಡೆಯಿತು   

ಯಾದಗಿರಿ: ‘ಭಾದ್ರಪದ ಹುಣ್ಣಿಮೆಯಿಂದ ಹದಿನೈದು ದಿನಗಳ ಕಾಲವನ್ನು ಅಂದರೆ ಅಮವಾಸ್ಯೆವರೆಗಿನ ಅವಧಿಯೇ ಪಿತೃಪಕ್ಷ. ಇದಕ್ಕೆ ಅಪರಪಕ್ಷವೆಂತಲೂ ಕರೆಯಲಾಗುತ್ತದೆ’ ಎಂದು ಪಂ.ರಾಘವೆಂದ್ರಾಚಾರ ಜೋಶಿ ಹೇಳಿದರು.

ಯಾದಗಿರಿ ನಗರದ ಉತ್ತರಾದಿ ಮಠದ ಪರಿಮಳ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡ ಪಿತೃಪಕ್ಷ ತರ್ಪಣ ಮಾಡಿಸಿ ಮಾತನಾಡಿದರು.

‘ಪಿತೃಪಕ್ಷ ಈ ದಿನದಲ್ಲಿ ಮೃತ ಹಿರಿಯರ ನೆನೆಯುವ ಕಾಲ. ಪಿತೃಗಳ ಆರಾಧನೆಯಿಂದ ಆಯುಷ್ಯ, ಸಂತಾನ, ಸಂಪತ್ತು, ಜ್ಞಾನ ದೊರೆಯುತ್ತದೆ’ ಎಂದರು.

ADVERTISEMENT

‘ಮಹಾಲಯ ಅಮಾವಾಸ್ಯೆ ಸಮಯ ತರ್ಪಣ ಕೊಡಬೇಕು. ಗರುಡ ಪುರಾಣದ ಪ್ರಕಾರ ಪಿತೃಪಕ್ಷದ ಸಂದರ್ಭದಲ್ಲಿ ಪಿತೃದೇವತೆಗಳು ಮತ್ರ್ಯಲೋಕದಿಂದ ತಮ್ಮ ವಂಶಸ್ಥರನ್ನು ನೋಡಲೆಂದು ಬರುತ್ತಾರೆ. ತಮ್ಮ ವಂಶಸ್ಥರು ಕೊಡುವ ಪಿಂಡಪ್ರದಾನ, ತಿಲ ತರ್ಪಣಾದಿಗಳನ್ನು ಸ್ವಿಕರಿಸಿ ಅವರನ್ನು ಹರಸಿ ಹೋಗುತ್ತಾರೆ’ ಎಂದು ತಿಳಿಸಿದರು.

ನರಸಿಂಹಾಚಾರ್, ವಾದಿರಾಜ ಆಚಾರ್, ಜಿತೇಂದ್ರ ಕುಲಕರ್ಣಿ, ಕೃಷ್ಣಮೂರ್ತಿ ಕುಲಕರ್ಣಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.