ADVERTISEMENT

ಯಾದಗಿರಿ | ಪ್ರಜಾವಾಣಿ ವರದಿ ಪರಿಣಾಮ: ಕಂಚಗಾರಹಳ್ಳಿ ತಾಂಡಾಕ್ಕೆ ಬಸ್ ಆರಂಭ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 7:21 IST
Last Updated 1 ಜನವರಿ 2022, 7:21 IST
ಕಂಚಗಾರಳ್ಳಿದಲ್ಲಿ ಗ್ರಾಮಸ್ಥರು ಬಸ್ ಚಾಲಕ, ನಿರ್ವಾಹಕರನ್ನು ಸನ್ಮಾನಿಸಿದರು
ಕಂಚಗಾರಳ್ಳಿದಲ್ಲಿ ಗ್ರಾಮಸ್ಥರು ಬಸ್ ಚಾಲಕ, ನಿರ್ವಾಹಕರನ್ನು ಸನ್ಮಾನಿಸಿದರು   

ಯರಗೋಳ: ಸಮೀಪದ ಕಂಚಗಾರಳ್ಳಿ ತಾಂಡಕ್ಕೆ ಗುರುವಾರ ಬಸ್ ಸಂಚಾರ ಆರಂಭಗೊಂಡಿದ್ದು, ತಾಂಡಾ ನಿವಾಸಿಗಳ ಹಲವು ವರ್ಷಗಳಕನಸು ನನಸಾಗಿದೆ.

ತಾಂಡಾಕ್ಕೆ ಬಸ್ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಬಸ್‌ಗೆ ಪೂಜೆ ನೆರವೇರಿಸಿ ಸ್ವಾಗತಿಸಿದರು. ಬಸ್ ಚಾಲಕರಿಗೆ ಹೂಮಾಲೆ ಹಾಕಿ ಸನ್ಮಾನಿಸಿ ಸಂಭ್ರಮಿಸಿದರು.

ನಂತರ ವಿದ್ಯಾರ್ಥಿಗಳು ಬಸ್‌ನಲ್ಲಿ ಕುಳಿತು ಯಾದಗಿರಿ ನಗರಕ್ಕೆ ಪ್ರಯಾಣ ಬೆಳೆಸಿದರು.

ADVERTISEMENT

‘ಮೇಲಧಿಕಾರಿಗಳ ಆದೇಶದಂತೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿದಿನ ಬೆಳಿಗ್ಗೆ 8ರಿಂದ ಕಂಚುಗಾರಹಳ್ಳಿ ತಾಂಡಾಗೆ ಬಸ್ ಆಗಮಿಸಲಿದೆ. ಯಾದಗಿರಿಯಿಂದ ಸಂಜೆ 5.15ಕ್ಕೆ ತಾಂಡಾ ತಲುಪಲಿದೆ ಎಂದರು.

ಈ ವೇಳೆ ಪಪ್ಯಾ ಚವ್ಹಾಣ್ ಸಂತೋಷ ಚವ್ಹಾಣ್, ರಾಜು ರಾಠೋಡ್, ಸೋಮು ರಾಠೋಡ್, ಸಂಜಯ್ ರಾಠೋಡ್, ದೇವರಾಮ್ ರಾಠೋಡ್, ಸಚಿನ್ ಚವಾಣ್, ಯುವಕರು ಉಪಸ್ಥಿತರಿದ್ದರು. ಬಸ್ ಚಾಲಕರಿಗೆ ಹೂಮಾಲೆ ಹಾಕಿ ಸನ್ಮಾನಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.