ಶಹಾಪುರ: ಭಾರತೀಯ ಸೇನೆಯ ಅಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಯಶಸ್ವಿ ಆಗಿದ್ದರಿಂದ ತಾಲ್ಲೂಕಿನ ಎಲ್ಲ ಮಸೀದಿಗಳಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಮುಖಂಡರಾ ಸಯ್ಯದ್ ಮುಸ್ತಾಫ್ ದರ್ಬಾನ್ ಹಾಗೂ ಯೂಸೂಫ್ ಸಿದ್ದಕಿ ತಿಳಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ನೀಡಿದ ಅವರು, ದುಷ್ಟಶಕ್ತಿಗಳನ್ನು ಸಂಹಾರ ಮಾಡಿದ ದೇಶದ ಯೋಧರಿಗೆ ಒಳಿತಾಗಲಿ. ಸೇನೆಗೆ ಮತ್ತಷ್ಟು ಶಕ್ತಿಯನ್ನು ಅಲ್ಲಾ ಕರುಣಿಸಲಿ. ದೇಶದಲ್ಲಿ ಮತ್ತೆ ಶಾಂತಿ ತ್ವರಿತವಾಗಿ ಸ್ಥಾಪಿತವಾಗಲಿ. ಹುತಾತ್ಮರಾದ ವೀರಯೋಧರಿಗೆ ಗೌರವ ಸಮರ್ಪಣೆ ಸಲ್ಲಿಸಿ, ನಾವೆಲ್ಲರೂ ಮನುಜ ಪಥದತ್ತ ಸಾಗಬೇಕು ಎಂದು ತಿಳಿಸಿದ್ದಾರೆ.
ಮುಖಂಡರಾದ ಲಾಲ್ ಅಹ್ಮದ್ ಖುರೇಶಿ, ಸಲೀಂ ಸಂಗ್ರಾಮ, ಸದ್ದಾಂ ದಾದೂಲ್ಲಾ, ಸಯ್ಯದ ಇಬ್ರಾಹಿಂಸಾಬ್, ನುಯಾನ್ ಖಾಜಿ, ನೂರುಲ್ ಹಸನ್ ಮುಲ್ಲಾ, ಸಯ್ಯದ್ ಇಸಾಖ ಹುಸೇನ್, ನಿಜಾಮುದ್ದೀನ್ ಜಮಖಂಡಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.