ಶಹಾಪುರ: ಆಸ್ತಿ ವಿವಾದದಿಂದ ಮಗನೇ ತಂದೆಯನ್ನು ಭಾನುವಾರ ತಾಲ್ಲೂಕಿನ ಮಡ್ನಾಳ ಕ್ಯಾಂಪ್ ಹತ್ತಿರ ಕೊಲೆ ಮಾಡಿದ್ದಾನೆ.
ಶಹಾಪುರ ನಗರದ ಹಳಿಸಗರದ ಯಂಕಪ್ಪ ಅಂಬಲಪ್ಪ ಮ್ಯಾಕಲದೊಡ್ಡಿ(65) ಕೊಲೆಯಾದ ವ್ಯಕ್ತಿ.
ನಾಗಪ್ಪ ಯಂಕಪ್ಪ(29) ಕೊಲೆ ಮಾಡಿದ ಯುವಕ.
ಭಾನುವಾರ ಮಡ್ನಾಳ ಸೀಮಾಂತರದಲ್ಲಿ ಬರುವ ತಮ್ಮ ಹೊಲಕ್ಕೆ ಹಳಿಸಗರದಿಂದ ಯಂಕಪ್ಪ ತೆರಳಿದ್ದರು. ಆಗ ತಂದೆ ಮತ್ತು ಮಗನ ನಡುವೆ ಆಸ್ತಿ ವಿಷಯವಾಗಿ ಜಗಳ ನಡೆದಿದೆ. ಆಗ ಸಿಟ್ಟಿನಿಂದ ಮಗ ನಾಗಪ್ಪ ತಂದೆಯ ಮೇಲೆ ಹಲ್ಲೆ ಮಾಡಿದಾಗ ಸ್ಥಳದಲ್ಲಿಯೇ ಯಂಕಪ್ಪ ಮೃತಪಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭೇಟಿ: ಕೊಲೆ ಸುದ್ದಿ ತಿಳಿದ ಬಳಿಕ ಘಟನಾ ಸ್ಥಳಕ್ಕೆ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುರಪುರ ಡಿವೈಎಸ್ಪಿ ಜಾವೇದ್ ಇನಾಂದಾರ, ಸಿಪಿಐ ಶರಣಗೌಡ ನ್ಯಾಮಣ್ಣನವರ ಹಾಗೂ ಇತರ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.