ADVERTISEMENT

ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಗುಜ್ಜುಕೋಲು ಮುಟ್ಟಿದ ಪರಿಶಿಷ್ಟ ಜಾತಿ ಬಾಲಕನಿಗೆ ದಂಡ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 5:00 IST
Last Updated 23 ಸೆಪ್ಟೆಂಬರ್ 2022, 5:00 IST
ಶಹಾಪುರ ತಹಶೀಲ್ದಾರ್ ಮಧುರಾಜ ಕೂಡ್ಲೂಗಿ ಅವರಿಗೆ ದಲಿತ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು
ಶಹಾಪುರ ತಹಶೀಲ್ದಾರ್ ಮಧುರಾಜ ಕೂಡ್ಲೂಗಿ ಅವರಿಗೆ ದಲಿತ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು   

ಶಹಾಪುರ: ಕೋಲಾರ ಜಿಲ್ಲೆಯ ಉಳ್ಳೇರಹಳ್ಳಿ ಗ್ರಾಮದಲ್ಲಿ ಗುಜ್ಜುಕೋಲು ಮುಟ್ಟಿದ ಪರಿಶಿಷ್ಟ ಜಾತಿ ಬಾಲಕನಿಗೆ ದಂಡ ವಿಧಿಸಿದ ಘಟನೆಯನ್ನು ಖಂಡಿಸಿ ಗುರುವಾರ ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡರು ತಹಶೀಲ್ದಾರ ಮಧುರಾಜ ಕೂಡ್ಲೂಗಿ ಅವರಿಗೆ ಮನವಿ ಸಲ್ಲಿಸಿದರು.

ಮುಗ್ದ ಮಕ್ಕಳ ಮೇಲೆ ಜಾತಿಯ ವಿಷ ಬೀಜದ ನೆರಳು ಹಾಕಿರುವ ದುಷ್ಟಶಕ್ತಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು. ಇಂತಹ ಘಟನೆ ನಡೆದಾಗ ಅಧಿಕಾರಿಗಳು ಭೇಟಿ ನೀಡಿ ಕಣ್ಣೋರೊಸುವ ತಂತ್ರ ಬೇಡ. ಕಾನೂನು ಪಾಲನೆಯ ಮೂಲ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಶಿವುಪುತ್ರ ಜವಳಿ, ಶಿವುಕುಮಾರ ತಳವಾರ, ಮಲ್ಲಿಕಾರ್ಜುನ ಹುರಸಗುಂಡಗಿ. ಬಾಲರಾಜ ಖಾನಾಪುರ,ಮರೆಪ್ಪ ಕ್ರಾಂತಿ ಸೇರಿದಂತೆ ಸ್ಥಳೀಯರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.