ADVERTISEMENT

ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 5:23 IST
Last Updated 25 ಸೆಪ್ಟೆಂಬರ್ 2022, 5:23 IST
ಕೋಡೆಕಲ್ ಪೊಲೀಸ್ ಠಾಣೆಯ ಅಧಿಕಾರಿಗಳ ತಾರತಮ್ಯ ನೀತಿ ಖಂಡಿಸಿ ಮಾದಿಗ ಯುವ ಸೇನೆಯಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಲಾಯಿತು
ಕೋಡೆಕಲ್ ಪೊಲೀಸ್ ಠಾಣೆಯ ಅಧಿಕಾರಿಗಳ ತಾರತಮ್ಯ ನೀತಿ ಖಂಡಿಸಿ ಮಾದಿಗ ಯುವ ಸೇನೆಯಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಲಾಯಿತು   

ಯಾದಗರಿ: ಆರೋಪಿಗಳನ್ನು ಬಂಧಿಸದೇ ಇರುವುದನ್ನು ಖಂಡಿಸಿ ಮಾದಿಗ ಯುವ ಸೇನೆ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ಮಾಡಿ ಬಂಧನಕ್ಕೆಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮಾದಿಗ ಯುವ ಸೇನೆ ರಾಜ್ಯ ಧ್ಯಕ್ಷ ನಂದಕುಮಾರ ಕನ್ನೆಳ್ಳಿ, ಸುರಪುರ ತಾಲ್ಲೂಕಿನ ಕಕ್ಕೇರಾ ಪಟ್ಟಣದ ಬೃಂದಾ ಇಂಡೇನ್ ಗ್ಯಾಸ್ ಏಜೆನ್ಸಿ ಗ್ರಾಮೀಣ ವಿತರಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ರೌಡಿಶಿಟರ್ ಪರಮಣ್ಣ ದೊಡ್ಡಮನಿ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿದರು.

ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಭಾರತಿ ಇತರರ ವಿರುದ್ಧ ಕೋಡೆಕಲ್ ಪೊಲೀಸ್ ಠಾಣೆಯ ಎಎಸ್‌ಐ ಬೆದರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ. ರೌಡಿಶಿಟರ್ ಪರಮಣ್ಣ ದೊಡ್ಡಮನಿ ವಿರುದ್ಧ ದಾಖಲಾದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸದೇ ಅವರನ್ನು ರಾಜಾರೋಷವಾಗಿ ತಿರುಗಾಡಲು ಬಿಟ್ಟು ಪ್ರಕರಣವನ್ನೇ ರದ್ದುಪಡಿಸಲು ಮುಂದಾಗಿರುವುದನ್ನುಖಂಡಿಸಿದರು.

ADVERTISEMENT

ಮುಖಂಡ ಬಸವರಾಜ ಹಗರಟಗಿ ಮಾತನಾಡಿ, ಮಹಿಳೆ ಮೇಲೆ ಮಾನಭಂಗ ಮಾಡಲು ಯತ್ನಿಸಿದ ರೌಡಿಶೀಟರ್ ಪರಮಣ್ಣ ದೊಡ್ಡಮನಿ ಇತರರ ವಿರುದ್ಧ ಪ್ರಕರಣ ದಾಖಲಾದರೂ ಪೊಲೀಸರು ಕಾನೂನು ಕ್ರಮ ಕೈಗೊಳ್ಳದೇ ಪ್ರಕರಣ ಮುಚ್ಚಿಹಾಕಲು ಹೊರಟಿದ್ದಾರೆ. ಭಾರತಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವ ಪೊಲೀಸರ ನಡೆಯನ್ನುಟೀಕಿಸಿದರು.

ಆರೋಪಿ ಪರಮಣ್ಣ ದೊಡ್ಡಮನಿ ವಿರುದ್ಧ ಕೋಡೆಕಲ್ ಪೊಲೀಸ್ ಠಾಣೆಯಲ್ಲಿ ರೌಡಿಶಿಟರ್ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಿದ್ದು, ಕೂಡಲೇ ಬಂಧಿಸಿ ಆರೋಪ ಪಟ್ಟಿ ಸಲ್ಲಿಸಬೇಕೆಂದು ಅವರುಆಗ್ರಹಿಸಿದರು.

ಈ ವೇಳೆ ಬಸವರಾಜ ಕೋಡೆಕಲ್, ಪರಶುರಾಮ ಪರಸನಳ್ಳಿ, ಕಾಶಪ್ಪ ಹೆಗ್ಗಣಗೇರಾ, ಮಲ್ಲಿಕಾರ್ಜುನ ಬಬಲಾದ, ಸಂಗಮೇಶ ಮಾಸ್ತರ, ಸಿದ್ದು ಮೇಲಿನಮನಿ, ರಾಜು, ಮಲ್ಲು ಕೆಂಭಾವಿ, ಭೀಮಣ್ಣ ಕಕ್ಕೇರಾ, ಸಿದ್ದು ಯಡ್ಡಳ್ಳಿ, ಮಂಜು ನಾರಾಯಣಪುರ, ಬಸವರಾಜ ಸೂಗುರ, ಹಣಮಂತ ಬೇಟೆಗಾರ, ಬಸವರಾಜ ಸೇರಿದಂತೆ ಮಾದಿಗ ಯುವ ಸೇನೆಯ ಮುಖಂಡರು, ಕಾರ್ಯಕರ್ತರುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.