ADVERTISEMENT

‘ಬಿಜೆಪಿ ವೈಫಲ್ಯ ಮರೆಸಲು ಇಡಿ ಬಳಕೆ’

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 1:39 IST
Last Updated 22 ಜೂನ್ 2022, 1:39 IST
ಗುರುಮಠಕಲ್ ಪಟ್ಟಣದ ಮಂಗಳವಾರ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶರಣಬಸವ ರಾಣಪ್ಪ ಅವರಿಗೆ ಮನವಿ ಪತ್ರ ನೀಡಿದರು
ಗುರುಮಠಕಲ್ ಪಟ್ಟಣದ ಮಂಗಳವಾರ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶರಣಬಸವ ರಾಣಪ್ಪ ಅವರಿಗೆ ಮನವಿ ಪತ್ರ ನೀಡಿದರು   

ಪ್ರಜಾವಾಣಿ ವಾರ್ತೆ

ಗುರುಮಠಕಲ್: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಅಭಿವೃದ್ಧಿ ಶೂನ್ಯವಾಗಿದೆ. ಅದನ್ನು ಮರೆ ಮಾಚುವುದಕ್ಕಾಗಿ ತನಿಕಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸಿರೆಡ್ಡಿಗೌಡ ಪಾಟೀಲ ಅನಪೂರ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂವಿಧಾನಿಕ ಸಂಸ್ಥೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಕ್ಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ವಿನಾ ಕಾರಣ ರಾಹುಲ ಗಾಂಧಿಯವರನ್ನು ಜಾರಿ ನಿರ್ದೇಶನಾಲಯದ ಮೂಲಕ ತನಿಖೆ ಮಾಡಿಸಲಾಗುತ್ತಿದೆ. ಜನರ ದೃಷ್ಟಿಯನ್ನು ಬದಲಿಸುವ ಹುನ್ನಾರದಿಂದ ಬಿಜೆಪಿ ನಡೆಸಿದ ಷಡ್ಯಂತ್ರವನ್ನು ಕೂಡಲೆ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು. ಬ್ಲಾಕ್ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಹತ್ತಿಕುಣಿ ಮಾತನಾಡಿದರು.ವಿಶ್ವನಾಥ ನೀಲಹಳ್ಳಿ, ನರಸಿಂಹರೆಡ್ಡಿ ಚಂಡ್ರಿಕಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೃಷ್ಣಾ ಚಪೆಟ್ಲಾ, ಶಿವಲಿಂಗಪ್ಪ ಇಟಗೆ, ಪುರಸಭೆ ಮಾಜಿ ಅಧ್ಯಕ್ಷ ರವೀಂದ್ರರೆಡ್ಡಿ ಪಾಟೀಲ್, ವಿಜಯಕುಮಾರ ನಿರೇಟಿ, ಪುರಸಭೆ ಸದಸ್ಯರಾದ ರವೀಂದ್ರರೆಡ್ಡಿ ಶೇರಿ, ಬಾಬು ತಲಾರಿ, ಖಾಜಾ ಮೈನೋದ್ಧೀನ, ಫಯಾಜ್ ಅಹ್ಮದ, ವೆಂಕಟರಾಮುಲು ಪುಟಪಾಕ, ಹೊನ್ನೇಶ ದೊಡ್ಮನಿ, ಶರಣಪ್ಪ ಮೋಟನಳ್ಳಿ, ಬಸವರಾಜ, ಸೈಯದ್ ಬಾಬಾ, ಖಾದರ್ ಪಾಶಾ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.