ADVERTISEMENT

ಅಧಿಕಾರ ದುರ್ಬಳಕೆ ಆರೋಪ: ಧರಣಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:57 IST
Last Updated 2 ಡಿಸೆಂಬರ್ 2025, 7:57 IST
ಯಾದಗಿರಿ ನಗರಸಭೆ ಮುಂಭಾಗದಲ್ಲಿ ಸೋಮವಾರ ಕರ್ನಾಟಕ ನವ ನಿರ್ಮಾಣ ಸೇನೆ ಮುಖಂಡರು ಧರಣಿ ನಡೆಸಿದರು  
ಯಾದಗಿರಿ ನಗರಸಭೆ ಮುಂಭಾಗದಲ್ಲಿ ಸೋಮವಾರ ಕರ್ನಾಟಕ ನವ ನಿರ್ಮಾಣ ಸೇನೆ ಮುಖಂಡರು ಧರಣಿ ನಡೆಸಿದರು     

ಯಾದಗಿರಿ: ನಗರದ ಆಶ್ರಯ ಕಾಲೊನಿಯ ವಸತಿ ಕಟ್ಟಡ ಬದಲು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಮುಖಂಡರು ಇಲ್ಲಿನ ನಗರಸಭೆ ಮುಂಭಾಗದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.  

ಆಶ್ರಯ ಯೋಜನೆಯಡಿ ವಸತಿ ರಹಿತರಿಗೆ ನಿವೇಶನ ನೀಡುವಲ್ಲಿ ಕೆಲ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು. ಮನೆಗಳ ಸಂಬಂಧ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಗರಸಭೆಯಿಂದ ನಕಲಿ ದಾಖಲೆಗಳು ಸೃಷ್ಟಿಸಿ, ಕೆಲ ಅಧಿಕಾರಿಗಳು ಅಕ್ರಮಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ಖಾತಾ ನಕಲು, ಪಿಐಡಿ ನಂಬರ್ ನೀಡಿ ಅಕ್ರಮದಾರರ ಜೊತೆ ಶಾಮೀಲಾಗಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡವರ ಮೇಲೆ ಪ್ರಕರಣ ದಾಖಲಿಸಬೇಕು. ಸದರಿ ಆಸ್ತಿಯ ದಾಖಲೆಗಳು ಸಮಗ್ರ ತನಿಖೆ ಆಗುವವರೆಗೂ ವಾಣಿಜ್ಯ ಕಟ್ಟಡಗಳ ನಿರ್ಮಾಣ ತಡೆಹಿಡಿಯಬೇಕು ಎಂದು ಹೇಳಿದ್ದಾರೆ.

ADVERTISEMENT

ಧರಣಿಯಲ್ಲಿ ಸೇನೆ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಮಾಸನ್, ಸಮಾಜ ಸೇವಕ ಶಿವರಾಜ ದಾಸನಕೇರಿ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲಾಧ್ಯಕ್ಷ ರಾಜಶೇಖರ ಎದುರುಮನಿ, ಪ್ರಮುಖರಾದ ಅನಿಲ್ ಕರಾಟೆ, ಅಂಬು ನಾಯಕ್, ಮಸಲಿಂಗ ನಾಯಕ್, ಉಮರ್ ಖಾನ್, ಹಣಮಂತ  ಶಿವು ನಾಯಕ್, ಶರಣು ಬೀರನೂರು ಸೇರಿ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.