ADVERTISEMENT

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 12:48 IST
Last Updated 22 ಜೂನ್ 2021, 12:48 IST
ಯರಗೋಳ ಸಮೀಪದ ಹೆಡಗಿಮದ್ರ ಗ್ರಾಮದಲ್ಲಿ ರೈತ ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ ಮಾಡಲಾಯಿತು
ಯರಗೋಳ ಸಮೀಪದ ಹೆಡಗಿಮದ್ರ ಗ್ರಾಮದಲ್ಲಿ ರೈತ ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ ಮಾಡಲಾಯಿತು   

ಹೆಡಗಿಮದ್ರ (ಯರಗೋಳ): ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಎಐಕೆಕೆಎಮ್ಎಸ್ ಸಂಘಟನೆ ಕರೆಯ ಮೇರೆಗೆ ಜೂನ್ 21 ರಂದು ಹೆಡಗಿಮದ್ರ ಗ್ರಾಮದಲ್ಲಿ ರೈತ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ಸಂಘಟನೆಯ ಜಿಲ್ಲಾ ಸಹಕಾರ್ಯದರ್ಶಿ ಜಮಾಲಸಭ್ ಮಾತನಾಡಿ, 'ಒಂದೆಡೆ ದೇಶವು ಕೋವಿಡ್‌ ಸಂಕಷ್ಟದಲ್ಲಿದ್ದರೆ, ಇನ್ನೊಂದೆಡೆ ನಮ್ಮನ್ನಾಳುವ ಸರ್ಕಾರಗಳು ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ಆಘಾತದ ಮೇಲೆ ಆಘಾತವನ್ನು ನೀಡುತ್ತಿವೆ. ಸರ್ಕಾರಗಳು ಜನತೆಯ ತೀವ್ರವಾದ ಕಷ್ಟದಲ್ಲಿರುವಾಗ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ಸತತವಾಗಿ ಹೆಚ್ಚಿಸುತ್ತಿದ್ದರೆ. ಗಾಯದ ಮೇಲೆ ಬರೆ ಎಳೆಯುವಂತ ವಂಚಕ ಹಾಗೂ ಹೀನಕೃತ್ಯವನ್ನು ಮಾಡುತ್ತಿರುವ ಸರ್ಕಾರಗಳ ಕ್ರಮವನ್ನು ರೈತ ಕಾರ್ಮಿಕ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಎಂದರು.

ಸಂಘಟನೆಯ ಗ್ರಾಮಘಟಕದ ಗೌರವಾಧ್ಯಕ್ಷ ವಿಶ್ವರಾಜ್ ಕೆಂಬಾವಿ, ಅಧ್ಯಕ್ಷ ಹಣಮಂತ ಮಡಿವಾಳ, ರಾಮಯ್ಯ ಖಾನಲ್ಲಿ, ನಬಿಲಾಲ್ ಕೋರ್ಬೋ, ಶಿವಪ್ಪ ಗೋಪಾಲಿ, ಶಂಕ್ರಪ್ಪ, ಧರ್ಮಣ್ಣ ಕಲಾಲ್ ಮತ್ತಿತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.