ಕಕ್ಕೇರಾ: ಸಮೀಪದ ತಿಂಥಣಿ ಪಿಡಿಒ, ನರೇಗಾ ಅಭಿಯಂತರರು, ಅಧ್ಯಕ್ಷರು ಸರಿಯಾಗಿ ಬಾರದೇ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಆಕ್ರೋಶವ್ಯಕ್ತಪಡಿಸಿ ಗುರುವಾರ ಪ್ರತಿಭಟನೆ ಆರಂಭಿಸಿದ ಸದಸ್ಯರು ಶುಕ್ರವಾರ ಸಹ
ಮುಂದುವರಿಸಿದರು.
ಸ್ಥಳಕ್ಕೆ ವಿವಿಧ ಅಧಿಕಾರಿಗಳು ಬಂದು ಮನವಿಲಿಸಿದರೂ ಸದಸ್ಯರು ಮಾತ್ರ ಒಪ್ಪಲಿಲ್ಲ.
ಪ್ರತಿಭಟನೆಯ ಮುಂದಾಳತ್ವವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬೈರಣ್ಣ ಅಂಬಿಗೇರ, ತಿಂಥಣಿ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲ. ಬೀದಿ ದೀಪ ಅವ್ಯವಸ್ಥೆ, ರಸ್ತೆಗಳು ಹಾಳಾಗಿದ್ದು ದುರಸ್ತಿ ಮಾಡುತ್ತಿಲ್ಲ, ಸ್ವಚ್ಛತೆ ಇಲ್ಲ.
ನರೇಗಾ ಸೇರಿ ಅನೇಕ ಕೆಲಸಗಳು ಹಾಗೇ ಉಳಿದಿವೆ ಎಂದು ಆಕ್ರೋಶವ್ಯಕ್ತಪಡಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಡಿಒ ನಾನು ವಾರದಲ್ಲಿ 2 ದಿನ ಕರ್ತವ್ಯಕ್ಕೆ ಹಾಜರಾಗಿದ್ದೇನೆ, ಹಾಜರಿ ಪುಸ್ತಕ ನೋಡಿ ಎಂದಾಗ, ತಾವು ಸುರಪೂರಕ್ಕೆ ಪುಸ್ತಕ ತರಿಸಿ ಸಹಿ ಮಾಡಿದ್ದೀರಿ ಎಂದು ಸದಸ್ಯರು ಆರೋಪಿಸಿದ್ದಾರೆ. ಪೋಲಿಸ್ ಅಧಿಕಾರಿಗಳು ಮನವೊಲಿಸಿದರೂ ಪ್ರಯೋಜನವಾಗಲಿಲ್ಲ.
ತಾಲ್ಲೂಕು ಪಂಚಾಯತ ವ್ಯವಸ್ಥಾಪಕರು ಆಗಮಿಸಿ, ಪಂಚಾಯಿತಿ ಬಾಗಿಲು ತೆಗೆಸಿ, ಸಾರ್ವಜನಿಕರಿಗೆ ಅನೂಕುಲ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಬೂದಗುಂಪಿ, ಭೀಮರಾಯ ರಾಯಗೇರಿ, ಸಲಿಂಸಾಬ ಕಂಬಾರ, ಶರಣು ಶಾಂತಪುರ, ಮಂಜುನಾಥ ಬೂದಗುಂಪಿ, ರಂಗನಾಥ ನಾಯಕ, ಗುರು ಸಾಹುಕಾರ, ಬಾಬು ಹವಾಲ್ದಾರ್ , ಗಂಗಾಧರನಾಯಕ, ಮಲ್ಲಿಕಾಜರ್ುನ ಸಾಹುಕಾರ, ಭಿನಶಪ್ಪಗೌಡ, ಭೀಮಣ್ಣ ಕವಾಲ್ದಾರ್, ಮಂಜುನಾಥ ಸಾಹುಕಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.