ADVERTISEMENT

PUC Result: ಮತ್ತೆ ಕೊನೆ ಸ್ಥಾನದಲ್ಲೇ ಉಳಿದ ಯಾದಗಿರಿ!

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 12:25 IST
Last Updated 8 ಏಪ್ರಿಲ್ 2025, 12:25 IST
   

ಯಾದಗಿರಿ: ಮಾರ್ಚ್ 1ರಿಂದ 20ರವರೆಗೆ ನಡೆದ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಮಂಗಳವಾರ ಹೊರ ಬಿದ್ದಿದ್ದು, ಮತ್ತೆ ಕೊನೆ ಸ್ಥಾನ ಗಟ್ಟಿಯಾಗಿದೆ. 32 ನೇ ಸ್ಥಾನ ಪಡೆದಿದೆ. ಈ ಮೂಲಕ ಕೆಳಗಡೆಯಿಂದ ಮೊದಲ ಸ್ಥಾನದಲ್ಲಿದೆ.

ಜಿಲ್ಲೆಯು ಪಿಯು ಫಲಿತಾಂಶದಲ್ಲಿ ಶೇ 48.45 ಪಡೆದಿದೆ. ಜಿಲ್ಲೆಯಲ್ಲಿ 11,369 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಮೂವರು ವಿದ್ಯಾರ್ಥಿನಿಯರೇ ಪ್ರಥಮ:

ADVERTISEMENT

ಜಿಲ್ಲೆಯ ಪಿಯು ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಬಾಲಕಿಯರೇ ಟಾಪರ್‌ ಆಗಿ ಮೂವರು ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ರಾಜೇಶ್ವರಿ ಗಣೇಶ (ಶೇ 97), ಕಲಾ ವಿಭಾಗದಲ್ಲಿ ನಸೀಮಾ ಭಾನು (ಶೇ 96.83), ವಾಣಿಜ್ಯ ವಿಭಾಗದಲ್ಲಿ ನಾಗವೇಣಿ ಶಿವರಾಜರೆಡ್ಡಿ (ಶೇ 95) ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.