ADVERTISEMENT

ಪಿಯು ವಿಜ್ಞಾನ: ಉಚಿತ ಪ್ರವೇಶಕ್ಕೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:30 IST
Last Updated 14 ಮೇ 2022, 2:30 IST
ಡಾ.ಸುದತ್ ದರ್ಶನಾಪುರ
ಡಾ.ಸುದತ್ ದರ್ಶನಾಪುರ   

ಶಹಾಪುರ: ನಗರದ ಸಾಯಿ ವಿದ್ಯಾನಿಕೇತನ ವಸತಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ 2022-23ನೇ ಶೈಕ್ಷಣಿಕ ಸಾಲಿಗೆ ಉಚಿತ ಪ್ರವೇಶ ಪಡೆಯಲು ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ‘ಬಾಪುಗೌಡ ದರ್ಶನಾಪುರ ಟ್ಯಾಲೆಂಟ್ ಸರ್ಚ್ ಟೆಸ್ಟ್’ ಪರೀಕ್ಷೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಸುದತ್ತ ದರ್ಶನಾಪುರ ತಿಳಿಸಿದ್ದಾರೆ.

ಮೇ 17ರಂದು ಬೆಳಗ್ಗೆ 10ಕ್ಕೆ ಕಾಲೇಜಿನಲ್ಲಿ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟಾಪ್ 10 ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದಲ್ಲಿ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು.

ಅಂದು ನಡೆಯುವ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಶಹಾಪುರ ಹಳೆಯ ಬಸ್ ನಿಲ್ದಾಣದಿಂದ ನಮ್ಮ ವಿದ್ಯಾ ಸಂಸ್ಥೆಯ ಬಸ್‌ ಸೌಲಭ್ಯ ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರವೇಶ ಪರೀಕ್ಷಾ ನೊಂದಣಿಗಾಗಿ ಮೊ: 9686642445 ಸಂಪರ್ಕಿಸಲು ಕೋರಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.