ಯಾದಗಿರಿಯಲ್ಲಿ ಸುರಿದ ಮಳೆ
ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ.
ನಗರದಲ್ಲಿ ಏಕಾಏಕಿ ಜೋರು ಗಾಳಿ ಬೀಸಿತು. ಜೊತೆಗೆ ಗುಡುಗು ಸಹಿತ ಆರಂಭವಾದ ಜೋರು ಮಳೆ 5ರಿಂದ 10 ನಿಮಿಷ ಸುರಿಯಿತು. ಜೋರಾಗಿ ಬೀಸಿದ ಗಾಳಿಗೆ ನಗರದ ಕೆಲವೆಡೆ ಟಿನ್ ಶೆಡ್‌ಗಳು ಮತ್ತು ಮೇಲೆ ಹಾಕಿದ ಪತ್ರಾಸ್‌ಗಳು ಹಾಗೂ ಹಳೆದಾದ ಮರ, ಗಿಡಗಳು ನೆಲಕಚ್ಚಿವೆ. ಹೀಗೆ ಏಕಾಏಕಿ ಬೀಸಿದ ಗಾಳಿಯಿಂದಾಗಿ ನಗರದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು.
ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಕೆಂಡದಂತಹ ಬಿಸಿಲು ಇದ್ದು, ಅಲ್ಪ ಮಳೆಗೆ ಮತ್ತಷ್ಟು ಕಾವು ಹೆಚ್ಚಾಗಿದೆ. ಜಿಲ್ಲೆಯ ಗುರುಮಠಕಲ್‌ನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಸೈದಾಪುರದಲ್ಲಿ ಗಾಳಿ ಸಹಿತ ಜೋರು ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.