ವಡಗೇರಾ: ನೂತನ ಪದಾಧಿಕಾರಿಗಳು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುವಂತೆ ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ್ ಕರೆ ನೀಡಿದರು.
ವಡಗೇರಾ ಪಟ್ಟಣದಲ್ಲಿ ಯಾದಗಿರಿ ಮತಕ್ಷೇತ್ರದ ಬಿಜೆಪಿ ಗ್ರಾಮೀಣ ಮಂಡಲದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ನಂತರ ಮಾತನಾಡಿದರು.
ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೆ ಯಜಮಾನರು. ಆ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಬಿಜೆಪಿ ಸಂಘಟನೆಯನ್ನು ಎಲ್ಲ ಪದಾಧಿಕಾರಿಗಳು ಮಾಡಬೇಕು. ಜತೆಗೆ ಕೆಂದ್ರದಲ್ಲಿರುವ ಮೋದಿ ನೇತೃತ್ವದ ಸರ್ಕಾರದ ಜನಪರ ಯೋಜನೆಗಳನ್ನು ಅರ್ಹ ಫಲಾನಿಭವಿಗಳಿಗೆ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ತಿಳಿಸಿದರು. ಮೋರ್ಚಾ ಹಾಗೂ ಮಂಡಲ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಮೋರ್ಚಾಪದಾಧಿಕಾರಿಗಳು: ಹಣಮಂತಪ್ಪ ವಾಲ್ಮೀಕಿ ನಾಯಕ ಕೋಳ್ಳೂರು ಎಮ್ (ಎಸ್.ಟಿ. ಮೋರ್ಚಾ ಅಧ್ಯಕ್ಷ), ಶರಣಪ್ಪ ಅವ್ವಣ್ಣೋರ್ ಕುರಕುಂದಾ (ಒಬಿಸಿ ಮೋರ್ಚಾ ಅಧ್ಯಕ್ಷ), ಸಂಗಾರೆಡ್ಡಿ ಗೋಡಿಹಾಳ (ರೈತ ಮೋರ್ಚಾ ಅಧ್ಯಕ್ಷ), ಸಿದ್ರಾಮರೆಡ್ಡಿ ಟಿ ವಡಗೇರಾ (ಯುವ ಮೋರ್ಚಾ ಅಧ್ಯಕ್ಷ), ಕರೆಮ್ಮ ವರ್ಕನಳ್ಳಿ (ಮಹಿಳಾ ಮೋರ್ಚಾ ಅಧ್ಯಕ್ಷೆ),ಹೀರಾಸಿಂಗ್ ರಾಥೋಡ ಬಸವನಗರ ತಾಂಡಾ (ಎಸ್ಸಿ ಮೇರ್ಚಾ ಅಧ್ಯಕ್ಷ)
ಗ್ರಾಮೀಣಮಂಡಲಪದಾಧಿಕಾರಿಗಳು: ಬಸರೆಡ್ಡಿಗೌಡ ಹೊಸಮನಿ ಕುರಕುಂದಾ (ಉಪಾಧ್ಯಕ್ಷ), ಮಲ್ಲಿನಾಥ ಮಲಗೊಂಡ ದೋರನಹಳ್ಳಿ (ಉಪಾಧ್ಯಕ್ಷ), ಭೀಮಾರಾಯ ಹೊಸಮನಿ ಖಾನಾಪೂರ (ಉಪಾಧ್ಯಕ್ಷ), ಶಿವನೀಲಮ್ಮ ಪಗಲಾಪೂರ (ಉಪಾಧ್ಯಕ್ಷೆ), ಮಲ್ಲಿಕಾರ್ಜುನ ಕಲ್ಮನಿ ಹಾಲಗೇರಾ (ಉಪಾಧ್ಯಕ್ಷ), ದೇವಿಂದ್ರಪ್ಪ ಮುಷ್ಟೂರು (ಉಪಾಧ್ಯಕ್ಷ), ಸಂಗಣ್ಣಗೌಡ ಅನ್ವಾರ (ಪ್ರಧಾನ ಕಾರ್ಯದರ್ಶಿ), ನಾಗರೆಡ್ಡಿಗವಡ ಇಬ್ರಾಹಿಂಪೂರ (ಪ್ರಧಾನ ಕಾರ್ಯದರ್ಶಿ), ಡಾ. ರಾಜಶೇಖರ ಕಾಡಂಗೇರಾ (ಕಾರ್ಯದರ್ಶಿ), ಕಲ್ಲಪ್ಪ ಖಾನಾಪುರ ದೋರನಹಳ್ಳಿ (ಕಾರ್ಯದರ್ಶಿ), ಅಯ್ಯಪ್ಪ ದೇಸಾಯಿ ಹಂಚಿನಾಳ (ಕಾರ್ಯದರ್ಶಿ), , ಮಲ್ಲಿಕಾರ್ಜುನ ವಗ್ಗನೋರ್ ಕುರಕುಂದಾ (ಕಾರ್ಯದರ್ಶಿ), ಲಕ್ಷ್ಮಣ ವರ್ಕನಹಳ್ಳಿ (ಕಾರ್ಯದರ್ಶಿ), ಸೋಮಸಿಂಗ್ ಚವ್ಹಾಣ ಗುಂಡಳ್ಳಿ ತಾಂಡಾ (ಕಾರ್ಯದರ್ಶಿ), ದಂಡಪ್ಪ ಕುಪಗಲ್ ಮುದ್ನಾಳ (ಕಾರ್ಯದರ್ಶಿ), ನಾಗಶೇಟ್ಟಿ ಸಾಹು ಖಾನಾಪೂರ (ಸಾಮಾಜಿಕ ಜಾಲತಾಣ ಸಂಚಾಲಕ) ರನ್ನು ಆಯ್ಕೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.