ADVERTISEMENT

ಪ್ರಜಾವಾಣಿ ವರದಿ ಪರಿಣಾಮ; ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳ ನಿಗದಿ!

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 15:57 IST
Last Updated 8 ಜನವರಿ 2025, 15:57 IST
ಯಾದಗಿರಿ ನಗರದ ಹಳೆ ಬಸ್‌ ನಿಲ್ದಾಣ ಸಮೀಪ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿರುವುದು
ಯಾದಗಿರಿ ನಗರದ ಹಳೆ ಬಸ್‌ ನಿಲ್ದಾಣ ಸಮೀಪ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿರುವುದು   

ಯಾದಗಿರಿ: ಪಾದಚಾರಿ ಮಾರ್ಗ ಅತಿಕ್ರಮಣ; ಸಂಚಾರ ಅಡಚಣೆ–ಅಪಘಾತಕ್ಕೂ ಕಾರಣ ಎನ್ನುವ ಶೀರ್ಷಿಕೆಯಡಿ 2024ರ ಡಿಸೆಂಬರ್ 16ರಂದು ಪ್ರಕಟವಾಗಿದ್ದ ವರದಿಗೆ ನಗರಸಭೆ ಸ್ಪಂದಿಸಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ ನಿಗದಿಪಡಿಸಿ ವಾಹನಗಳಿಗೆ ಪ್ರತ್ಯೇಕ ಮಾರ್ಗ ನಿರ್ಮಿಸಿದೆ.

ನಗರದ ಹಳೆ ಬಸ್‌ ನಿಲ್ದಾಣ ಸಮೀಪ ಬೀದಿ ಬದಿ ವ್ಯಾಪಾರಿಗಳು ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದರು. ಈ ಬಗ್ಗೆ ಪ್ರಜಾವಾಣಿಯಲ್ಲಿ ವಿಸ್ತ್ರೃತ ವರದಿ ಪ್ರಕಟಗೊಂಡಿತ್ತು. ನಂತರ ಎಚ್ಚೆತ್ತ ನಗರಸಭೆ ಆಡಳಿತ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡುವ ಕುರಿತಂತೆ ವ್ಯಾಪಾರಿಗಳ ಜತೆ ಮಾತುಕತೆ ಮಾಡಿತ್ತು. ಆದರೆ, ಕೆಲವರು ಜನಪ್ರತಿನಿಧಿಗಳ ಬಳಿ ತೆರಳಿ ತಮ್ಮ ಅಳಲು ತೋಡಿಕೊಂಡಿದ್ದರು. ನಂತರ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರ ನೇತೃತ್ವದಲ್ಲಿ ವ್ಯಾಪಾರಿಗಳ ಮನವೊಲಿಸಿ ಸ್ಥಳ ನಿಗದಿ ಮಾಡಿದ್ದರು.

ಕಬ್ಬಿಣದ ಸರಳು ನಿರ್ಮಾಣ

ADVERTISEMENT

ಹಳೆ ಬಸ್‌ ನಿಲ್ದಾಣ ಸಮೀಪ ಅಂಗಡಿಗಳ ಮುಂದೆ ಕಬ್ಬಿಣದ ಸರಳುಗಳ ನಿರ್ಮಾಣ ಮಾಡಿ ಅಷ್ಟರೊಳಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ವಾಹನಗಳ ನಿಲುಗಡೆ ಸ್ಥಳಾವಕಾಶ ಸಿಕ್ಕಂತೆ ಆಗಿದೆ. ಅಲ್ಲದೇ ಅಂಗಡಿಗೆ ತೆರಳಲು ಜಾಗ ಬಿಟ್ಟು ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ನಿಯಮ ಪಾಲಿಸಿ

ನಗರಸಭೆ ವತಿಯಿಂದ ಮಾಡಿರುವ ಕಾರ್ಯಕ್ಕೆ ವ್ಯಾಪಾರಸ್ಥರು ಸಹಕಾರ ನೀಡಬೇಕು. ನಿಯಮ ಪಾಲನೆಗೆ ನಗರಸಭೆಯಿಂದ ಸಿಬ್ಬಂದಿಯೊಬ್ಬರನ್ನು ನೇಮಕ ಮಾಡಲಾಗಿದೆ. ನಿಯಮ ಪಾಲನೆ ಮಾಡದಿದ್ದರೆ ತಳ್ಳುಗಾಡಿಗಳನ್ನು ವಶಪಡಿಸಿಕೊಳ್ಳಲಾಗುವುದು. ಇದಾದ ನಂತರ ಮುಲಾಜಿಲ್ಲದೇ ಬೀದಿ ಬದಿ ವ್ಯಾಪಾರ ಕಾರ್ಡ್‌ ರದ್ದು ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಎಚ್ಚರಿಕೆ ನೀಡಿದ್ದಾರೆ.

ಯಾದಗಿರಿ ನಗರದ ಹಳೆ ಬಸ್‌ ನಿಲ್ದಾಣ ಸಮೀಪ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿರುವುದು
ನಗರದ ಸೌಂದರ್ಯೀಕರಣಕ್ಕೆ ನಾಗರಿಕರು ನಗರಸಭೆ ಜತೆ ಕೈಜೋಡಿಸಬೇಕು. ವ್ಯಾಪಾರಿಗಳಿಗೆ ನಿಗದಿ ಪಡಿಸಿದ ಸ್ಥಳದಲ್ಲೇ ವ್ಯಾಪಾರ ಮಾಡಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು.
–ಲಲಿತಾ ಅನಪುರ, ನಗರಸಭೆ ಅಧ್ಯಕ್ಷೆ
ನಗರಸಭೆ ವತಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ ಕೆಲವರು ನಿಯಮ ಮೀರಿ ಮತ್ತೆ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ.
–ರೋಹಿತ್‌ ಬೀದಿ ಬದಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.