ADVERTISEMENT

ಯಾದಗಿರಿ | ವಿವಿಧೆಡೆ ಗಣರಾಜ್ಯೋತ್ಸವ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 8:16 IST
Last Updated 27 ಜನವರಿ 2026, 8:16 IST
ಯಾದಗಿರಿಯ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ ಕಚೇರಿಯಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ರಾಘವೇಂದ್ರ ಮಾತನಾಡಿದರು
ಯಾದಗಿರಿಯ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ ಕಚೇರಿಯಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ರಾಘವೇಂದ್ರ ಮಾತನಾಡಿದರು   

ಯಾದಗಿರಿ: ನಗರದ ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಸೋಮವಾರ ಗಣರಾಜ್ಯೋತ್ಸವ ಆಚರಿಸಿ ಧ್ವಜಾರೋಹಣ ಮಾಡಲಾಯಿತು.

ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾರ್ಯನಿರ್ವಾಹಕ ಎಂಜಿನಿಯರ್ ಡಿ. ರಾಘವೇಂದ್ರ, ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಲವು ರಾಷ್ಟ್ರಗಳ ಸಂವಿಧಾನಗಳನ್ನು ಓದಿ, ಪ್ರತಿಯೊಬ್ಬರಿಗೂ ಒಂದೇ ಕಾನೂನು ಒಂದೇ ನ್ಯಾಯದ ಸಂವಿಧಾನ ರಚಿಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಒಂದೇ ರೀತಿಯ ಕಾನೂನು, ಸಮಾನ ಹಕ್ಕುಗಳು ನೀಡಲಾಗಿದೆ’ ಎಂದರು

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಸಂಜು ಕುಮಾರ್, ಅಂಬರೀಶ್, ಜರಿನಾ ಬೇಗಂ, ಮಾಣಿಕ್ ರಾವ್ ಕುಲಕರ್ಣಿ, ಲೆಕ್ಕಾಧಿಕಾರಿ ಅಶೋಕ್ ಕುಮಾರ್, ಬಸವರಾಜ್, ಜೆಸ್ಕಾಂ ಜಾಗೃತದಳದ ಭೀಮರತ್ನ ಸಜ್ಜನ್, ಪಿಎಸ್‌ಐ ರಾಮುಲು ಉಪಸ್ಥಿತರಿದ್ದರು.

ADVERTISEMENT

ಡಿಡಿಯು: ನಗರದ ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಸಂಸ್ಥೆಯ ಸಂಸ್ಥಾಪಕ ಭೀಮಣ್ಣ ಮೇಟಿ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ಭಾಷಣ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಆಡಳಿತಾಧಿಕಾರಿ ಮಲ್ಲಿಕಾರ್ಜುನ್ ಮೇಟಿ, ಶಾಲೆಗಳ ಪ್ರಾಂಶುಪಾಲರಾದ ಬಬಿನ್ ರಾಜ್, ರಾಜೇಶ್ ಕುಮಾರ್, ಮುಖ್ಯಶಿಕ್ಷಕ ವೆಂಕಟೇಶ ಪೂಜಾರಿ, ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ, ವಸತಿ ನಿಲಯದ ಮೇಲ್ವಿಚಾರಕ ನಿಂಗಣ್ಣ ಹೊಸಮನಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕರವೇ: ನಗರದ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಜಿಲ್ಲಾ ಕಚೇರಿಯಲ್ಲಿ ಸೋಮವಾರ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹುತಾತ್ಮ ದಿನ ಆಚರಿಸಲಾಯಿತು. ಡಾ. ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂದೀಜಿ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.

ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಮುಖಂಡರಾದ ವಿಶ್ವರಾಜ ಪಾಟೀಲ, ಅರ್ಜುನ ಪವಾರ, ಅಶೋಕ ನಾಯಕ, ಅನಿಲ್ ದಾಸನಕೇರಿ, ನಾಗು ತಾಂಡೂರಕರ್, ಬಸವರಾಜ ಜಗನ್ನಾಥ, ಬಸವರಾಜ ಕಡ್ಡಿ, ಶರಣು ಹಬ್ಬಳಿ, ಮಲ್ಲು ಬಂದಳ್ಳಿ, ಸಿದ್ದು ರಾಮಸಮುದ್ರ ಸೇರಿ ಇತರರು ಪಾಲ್ಗೊಂಡಿದ್ದರು.‌‌

ಎಸ್.ಡಿ. ಆಂಗ್ಲ ಮಾಧ್ಯಮ ಶಾಲೆ: ನಗರದ ಎಸ್.ಡಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ದುರ್ಗಪ್ಪ ಎಚ್.ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿದರು.

‘ಭಾರತ ಸಂವಿಧಾನವು ವಿಶ್ವದಲ್ಲಿಯೇ ಲಿಖಿತ ರೂಪದಲ್ಲಿರುವ ದೊಡ್ಡ ಸಂವಿಧಾನವಾಗಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಮೂಲಭೂತ ಹಕ್ಕುಗಳನ್ನು ಪ್ರಜೆಗಳಿಗೆ ನೀಡಿದೆ. ಭಾರತೀಯರ ಸರ್ವತೋಮುಖ ಅಭಿವೃದ್ಧಿಯ ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂದು ಹೇಳಿದರು.

ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ಜರಗಿದವು. ಶಿಕ್ಷಕಿರಾದ ಶೋಭಾದೇವಿ, ಆಕಾಂಕ್ಷ ಡಿ.ಪೂಜಾರಿ, ಉತ್ತಮ್ಮ ಬೇಗಾರ್ ಹಾಜರಿದ್ದರು.

ಯಾದಗಿರಿ ನಗರದ ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನಾಚರಣೆ ಆಚರಿಸಲಾಯಿತು
ಯಾದಗಿರಿಯ ಕರವೇ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಗಣರಾಜ್ಯೋತ್ಸವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹುತಾತ್ಮ ದಿನ ಆಚರಿಸಲಾಯಿತು
ಯಾದಗಿರಿಯ ಎಸ್.ಡಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವ ಆಚರಿಸಲಾಯಿತು 
ಯಾದಗಿರಿ ನಗರದ ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಪಕ್ಷದ ಮುಖಂಡರು
ಯಾದಗಿರಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಆಚರಿಸಲಾದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಮುಖಂಡರು

‘ಏಕತೆಗಾಗಿ ಪ್ರತಿಜ್ಞೆ ಮಾಡೋಣ’

ಯಾದಗಿರಿ: ನಗರದ ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಸೋಮವಾರ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಮಾತನಾಡಿ ‘ನಮ್ಮ ಪಕ್ಷವು ರೈತರ ಹಕ್ಕುಗಳು ಗ್ರಾಮೀಣ ಅಭಿವೃದ್ಧಿ ಮತ್ತು ಜಾತ್ಯತೀತೆಯ ರಾಜಕಾರಣಕ್ಕೆ ಒತ್ತು ನೀಡುತ್ತಾ ಬಂದಿದೆ. ಗಣರಾಜ್ಯದ ಆಶಯಗಳನ್ನು ಈಡೇರಿಸುತ್ತಾ ಕರ್ನಾಟಕದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗಿದೆ. ಈ ದಿನ ರಾಷ್ಟ್ರೀಯ ಏಕತೆಗಾಗಿ ಎಲ್ಲರೂ ಪ್ರತಿಜ್ಞೆ ಮಾಡೋಣ’ ಎಂದರು. ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಾಗರತ್ನ ಅನಪುರ ಮಾತನಾಡಿ ‘ದೇಶಭಕ್ತಿ ಐಕ್ಯತೆ ಮತ್ತು ಸಂವಿಧಾನದ ಆದರ್ಶಗಳನ್ನು ಗೌರವಿಸುವ ಸುದಿನ ಇಂದು. ನಮ್ಮ ಸಂವಿಧಾನವು ಸಮಾನತೆ ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಎತ್ತಿ ಹಿಡಿಯುತ್ತದೆ’ ಎಂದು ಹೇಳಿದರು. ಮುಖಂಡರಾದ ಚನ್ನಪ್ಪಗೌಡ ಮೊಸಂಬಿ ವಿಶ್ವನಾಥ್ ಶಿರವಾರ ರಾಮಣ್ಣ ಕೋಟಗೇರಾ ಮಲ್ಲನಗೌಡ ಹಳಿಮನಿ ಬಂದಪ್ಪ ಹರಳಿ ಬಸ್ಸುಗೌಡ ರಾಜುಗೌಡ ಪರಮರೆಡ್ಡಿ ಶರಣಪ್ಪಗೌಡ ಬಸವರಾಜ ಗಿರೆಪ್ಪನೋರ ನರಸಿಂಹ ರೆಡ್ಡಿ ಶರಣುಗಾಡಿ ಹರೀಶವಾಲಿ ಮಲ್ಲು ಗುಂಡಗುರ್ತಿ ಉದಯ್ ನಿಂಗಪ್ಪ ಯಡ್ಡಳ್ಳಿ ಯಲ್ಲಾಲಿಂಗ ಚಾಮನಹಳ್ಳಿ ಸಾಯಿಬಣ್ಣ ಯಾದವ್ ಸೇರಿ ಇತರರು ಉಪಸ್ಥಿತರಿದ್ದರು.

ಬಿಜೆಪಿ ಕಚೇರಿಯಲ್ಲಿ ಆಚರಣೆ ಯಾದಗಿರಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸಡಗರದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮಹಾತ್ಮ ಗಾಂಧೀಜಿ ಡಾ.ಬಿ.ಆರ್. ಅಂಬೇಡ್ಕರ್ ಭಾರತಾಂಬೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮುಖಂಡರಾದ ದೇವಿಂದ್ರ ನಾಥ್ ನಾದ ಮಹೇಶರೆಡ್ಡಿ ಮುದ್ನಾಳ ಲಲಿತಾ ಅನಪುರ ನಾಗರತ್ನ ಕುಪ್ಪಿ ಸುನಿತಾ ಚವ್ಹಾಣ್ ರುಕಿಯಾ ಬೇಗಂ ವೀಣಾ ಮೋದಿ ಪ್ರಭಾವತಿ ಮಾರುತಿ ಕಲಾಲ್ ಲಿಂಗಪ್ಪ ಹತ್ತಿಮನಿ ಪರಶುರಾಮ ಕುರುಕುಂದಿ ರಾಜಶೇಖರ ವಡಿಗೇರಾ ವಿಲಾಸ್ ಪಾಟೀಲ ವೆಂಕಟರೆಡ್ಡಿ ಅಬ್ಬೆ ತುಮಕೂರ ಮಲ್ಲಿಕಾರ್ಜುನ ಕಟ್ಟಿಮನಿ ಸ್ವಾಮಿದೇವ ದಾಸನಕೇರಿ ಲಕ್ಷ್ಮಿಪುತ್ರ ಮಾಲಿ ಪಾಟೀಲ ರಮೇಶ್ ದೊಡ್ಡಮನಿ ರಾಜಶೇಖರ್ ಉಪ್ಪೇನ್ ಶರಣಗೌಡ ಕವಿತಾಳ ಚನ್ನವೀರಯ್ಯ ಸ್ವಾಮಿ ಭೀಮಾಬಾಯಿ ಸೇರಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.