ಹುಣಸಗಿ: ತಾಲ್ಲೂಕಿನ ನಾರಾಯಣಪುರ ಮಾರ್ಗವಾಗಿ ರಾತ್ರಿ ವೇಳೆ ವಿಜಯಪುರ ಹಾಗೂ ಕೊಡೇಕಲ್ಲ ಮಾರ್ಗವಾಗಿ ತಾಳಿಕೋಟಿಗೆ ಹೊಸ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ನಾರಾಯಣಪುರದಲ್ಲಿ ಸಾರಿಗೆ ನಿಯಂತ್ರಕ ಐ.ಎ.ಕರಣಿ ಅವರಿಗೆ ಸಲ್ಲಿಸಿದರು.
ಮುಖಂಡ ಸಂಗಮೇಶ ತಾಳಿಕೋಟಿ ಮಾತನಾಡಿ, ‘ಜಿಲ್ಲೆಯ ಗಡಿಭಾಗದ ನಾರಾಯಣಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಗ್ರಾಮಸ್ಥರಿಗೆ ರಾತ್ರಿ ವೇಳೆ ನಾರಾಯಣಪುರ ಮಾರ್ಗವಾಗಿ ಬಸ್‌ಗಳ ಸಂಚಾರವಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ರಾತ್ರಿ ವೇಳೆ ನಾರಾಯಣಪುರದಿಂದ ವಿಜಯಪುರ ಹಾಗೂ ಕೊಡೇಕಲ್ಲ ಮಾರ್ಗವಾಗಿ ತಾಳಿಕೋಟಿ, ಧಾರವಾಡ ಹುಬ್ಬಳ್ಳಿಗೆ ಬಸ್ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ನಾರಾಯಣಪುರ ಮಾರ್ಗವಾಗಿ ಬೆಳಿಗ್ಗೆ ಹಾಗೂ ರಾತ್ರಿ ವೇಳೆಗೆ ಹೊಸ ಬಸ್ ಸಂಚಾರ ಆರಂಭಿಸುವುದರಿಂದ ಈ ಭಾಗದ ವ್ಯಾಪಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ, ನಗರ ಪಟ್ಟಣದ ವೈದ್ಯಕೀಯ ಸೇವೆ ಪಡೆಯಲು ರೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.