ಸುರಪುರ: ತಾಲ್ಲೂಕಿನ ಶಾಂತಪುರ ಕ್ರಾಸ್‍ನಿಂದ ಬಲಶೆಟ್ಟಿಹಾಳವರೆಗಿನ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಮುಖಂಡರು ಶನಿವಾರ ಲೋಕೋಪಯೋಗಿ ಇಲಾಖೆಯ ಎಇಇ ಎಸ್.ಜಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಸಮಿತಿ ಅಧ್ಯಕ್ಷ ಬಸವರಾಜ ಹೊಸಮನಿ ಮಾತನಾಡಿ, ‘ಶಾಂತಪುರ ಕ್ರಾಸ್‍ನಿಂದ ಬಲಶೆಟ್ಟಿಹಾಳ ರಸ್ತೆ ಪ್ರಮುಖ ರಸ್ತೆಯಾಗಿದೆ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಡಾಂಬರ್ ಕಿತ್ತುಹೋಗಿದೆ. ಎರಡು ಬದಿ ಮುಳ್ಳುಕಂಟಿಗಳು ಬೆಳೆದಿವೆ’ ಎಂದು ತಿಳಿಸಿದರು.
‘ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯೂ ಅಧಿಕವಾಗಿದೆ. ಈಗಿನ ವಾಹನ ದಟ್ಟಣೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ರಸ್ತೆ ಕಿರಿದಾಗಿದೆ. ಕಾರಣ ರಸ್ತೆಯನ್ನು ವಿಸ್ತರಣೆ ಮಾಡಿ ಸಂಪೂರ್ಣ ಅಭಿವೃದ್ಧಿ ಪಡಿಸಬೇಕು’ ಎಂದು ಆಗ್ರಹಿಸಿದರು.
‘ಕಕ್ಕೇರಾ ಪಟ್ಟಣದ ವಾಲ್ಮೀಕಿ ವೃತ್ತದಿಂದ 12 ಕಿ.ಮಿ ವರೆಗಿನ ಹುಣಸಗಿ ರಸ್ತೆ ವಿಸ್ತರಣೆ ಮಾಡಬೇಕು. ನಿರ್ಲಕ್ಷ್ಯ ತೋರಿದಲ್ಲಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಬುಚ್ಚಪ್ಪನಾಯಕ ಗುರಿಕಾರ, ತಿಪ್ಪಣ್ಣ ಜಂಪಾ, ಸಂಗಣ್ಣ ಸುಬೇದಾರ, ಶಿವಬಸಪ್ಪ ದೇವತಕಲ್, ಸಿದ್ದು ಮಾಳಳ್ಳಿಕರ, ಅಯ್ಯಣ್ಣ ಬಚಿ, ಮರೆಪ್ಪ ಕಾಂಗ್ರೆಸ್, ಗೋವಿಂದ ಪತ್ತಾರ, ವೆಂಕಣ್ಣ ಕೋಳೂರು, ಹಣಮಂತ ಕಾಟ್ನಳ್ಳಿ, ಅಂಬ್ರೇಶ ಬೋವಿ, ಸೋಮು ಬನದೊಡ್ಡಿ, ಚಂದ್ರು ನಡಿಗೇರ, ಪರಮಣ್ಣ ಭಜಂತ್ರಿ, ವೆಂಕಟೇಶ ಕುಪಗಲ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.