ADVERTISEMENT

ರಸ್ತೆಗಳು ಅಭಿವೃದ್ಧಿಗೆ ಪೂರಕ: ಶಾಸಕ ನಾಗನಗೌಡ ಕಂದಕೂರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 15:33 IST
Last Updated 13 ಮಾರ್ಚ್ 2022, 15:33 IST
ನಾಗನಗೌಡ ಕಂದಕೂರ
ನಾಗನಗೌಡ ಕಂದಕೂರ   

ಯಾದಗಿರಿ: ಗ್ರಾಮೀಣ ಭಾಗದಲ್ಲಿ ನಿರ್ಮಾಣ ಮಾಡುತ್ತಿರುವ ರಸ್ತೆಗಳು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಗುರುಮಠಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಹೇಳಿದರು.

ತಾಲ್ಲೂಕಿನ ಸೈದಾಪುರ ಮುಖ್ಯರಸ್ತೆಯಿಂದ ಕೌಳೂರ ಗ್ರಾಮದ ವರೆಗೆ ಅಂದಾಜು ₹1.42 ಕೋಟಿ ವೆಚ್ಚದಲ್ಲಿ 5 ಕಿ.ಮೀ ರಸ್ತೆ ಸುಧಾರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಕಳೆದ 2 ವರ್ಷಗಳಿಂದ ದೇಶ ಹಾಗೂ ವಿಶ್ವದಲ್ಲಿ ಕೋವಿಡ್‌ ಕಾರಣ ಇಡೀ ಮನುಕುಲ ಸಂಕಷ್ಟ ಎದುರಿಸಿತು. ಜನರಿಗೆ ಸರಿಯಾದ ವೈದ್ಯಕೀಯ ಸೇವೆ ಸಿಗಲಿಲ್ಲ. ಇನ್ನೂ ವಾತಾವರಣ ತಿಳಿಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಜನರು ಎಚ್ಚರಿಕೆಯಿಂದ ಆರೋಗ್ಯ ಇಲಾಖೆ ತಿಳಿಸಿರುವ ನಿಯಮಗಳನ್ನು ಎಲ್ಲರು ಪಾಲಿಸಬೇಕು ಎಂದು ಕರೆ ನೀಡಿದರು.

ADVERTISEMENT

ಈ ಭಾಗದಲ್ಲಿ ಬಡ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗಲಿ ಎಂಬ ಸಂಕಲ್ಪದಿಂದ ಕೌಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಸೂಕ್ತ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದರು.

ಸಮಾರಂಭದಲ್ಲಿ ಪಿಎಂಜಿಎಸ್‌ವೈ ಸಹಾಯಕ ಎಂಜಿನಿಯರ್ ಸುರೇಶ, ಸಹಾಯಕ ಎಂಜಿನಿಯರ್ ಶಿವಾಜಿ, ಗುತ್ತಿಗೆದಾರ ಸಿದ್ದಪ್ಪಗೌಡ ಕಾಳೆಬೆಳಗುಂದಿ, ಮುಖಂಡರಾದ ಮಲ್ಲಣಗೌಡ ಹಳಿಮನಿ, ಮಲ್ಲಪ್ಪ ಜೀನಕೇರ, ರಾಮಣ್ಣ ಕೋಟಗೇರಾ, ಬನ್ನಪ್ಪಗೌಡ ಲಿಂಗೇರಿ, ಶರಣಗೌಡ ಹೊಸಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.