
ಪ್ರಜಾವಾಣಿ ವಾರ್ತೆ
ಆರ್‌ಎಸ್‌ಎಸ್ ಪಥಸಂಚಲನ
ಯಾದಗಿರಿ: ಗುರುಮಠಕಲ್ ಪಟ್ಟಣದಲ್ಲಿ ಅ. 31ರಂದು ಪಥಸಂಚಲನ ನಡೆಸಲು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಬುಧವಾರ ಷರತ್ತುಬದ್ಧ ಅನುಮತಿ ನೀಡಿದ್ದಾರೆ.
ಅನುಮತಿ ಸಿಗದಿದ್ದರಿಂದ ಅ.25ರಂದು ಪಥಸಂಚಲನ ಮುಂದೂಡಲಾಗಿತ್ತು. ಆಯೋಜಕರು ಅ.23ರಂದು ಜಿಲ್ಲಾಧಿಕಾರಿಗೆ ಮತ್ತೆ ಮನವಿ ಸಲ್ಲಿಸಿದ್ದರು. ಡಿಎಸ್‌ಪಿ ವರದಿ ಆಧರಿಸಿ ಈಗ ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿ ಅನುಮತಿ ಕೊಟ್ಟಿದ್ದಾರೆ.