ಶಹಾಪುರ: ತಾಲ್ಲೂಕಿನ ಸಗರ ಗ್ರಾಮದ ವಾರ್ಡ್ ನಂ. 8 ಮತ್ತು 9ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶುಕ್ರವಾರ ಹೊಸದಾಗಿ ಕೊಳವೆಬಾವಿ ಕೊರೆಯಿಸುವ ಕೆಲಸ ಆರಂಭಿಸಲಾಗಿದೆ. ಅಲ್ಲದೆ ಹೊಸದಾಗಿ ಪೈಪ್ ಅಳವಡಿಸುವಂತೆ ಜಿ.ಪಂ. ಇಲಾಖೆಯ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದು, ಎರಡು ದಿನದಲ್ಲಿ ಪೈಪ್ ಬರುವ ನಿರೀಕ್ಷೆಯಿದೆ. ಬಡಾವಣೆಯ ನಿವಾಸಿಗರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು ಎಂದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಗರ ಗ್ರಾ.ಪಂ ಪಿಡಿಒ ಸಿದ್ರಾಮಪ್ಪ ತಿಳಿಸಿದ್ದಾರೆ.
ಸದ್ಯ ಕೊರೆಯಿಸಲಾಗುತ್ತಿರುವ ಕೊಳವೆಬಾವಿ ಜಾಗದ ಸುತ್ತಲು ಉಪ್ಪು ಮಿಶ್ರಿತ ನೀರು ಇದೆ. ಹೊಸ ಕೊಳವೆಬಾವಿಯಿಂದ ದಿನ ಬಳಕೆಗೆ ನೀರು ಉಪಯೋಗಿಸಬಹುದು. ಆದರೆ ಕುಡಿಯಲು ಯೋಗ್ಯವಿಲ್ಲ ಎಂಬ ನಿವಾಸಿಗರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.