ADVERTISEMENT

ಸಂಗಮ: ಸಂಗಮೇಶ್ವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:24 IST
Last Updated 1 ಜನವರಿ 2026, 5:24 IST
ವಡಗೇರಾ ತಾಲ್ಲೂಕಿನ ಸುಕ್ಷೇತ್ರ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವದ ಬಿತ್ತಿ ಪತ್ರಗಳನ್ನು ಸಂಗಮದ ಸಂಗಮೇಶ್ವರ ದೇವಸ್ಥಾನದ ಪಿಠಾಧಿಪತಿ ಕರುಣೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು
ವಡಗೇರಾ ತಾಲ್ಲೂಕಿನ ಸುಕ್ಷೇತ್ರ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವದ ಬಿತ್ತಿ ಪತ್ರಗಳನ್ನು ಸಂಗಮದ ಸಂಗಮೇಶ್ವರ ದೇವಸ್ಥಾನದ ಪಿಠಾಧಿಪತಿ ಕರುಣೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು   

ವಡಗೇರಾ: ತಾಲ್ಲೂಕಿನ ಸುಕ್ಷೇತ್ರ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವದ ಬಿತ್ತಿ ಪತ್ರಗಳನ್ನು ಸಂಗಮದ ಸಂಗಮೇಶ್ವರ ದೇವಸ್ಥಾನದ ಪಿಠಾಧಿಪತಿ ಕರುಣೇಶ್ವರ ಸ್ವಾಮೀಜಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಜ.3 ರಂದು ಆರಂಭವಾಗಲಿರುವ ಶಿವಕುಮಾರ ಶಿವಯೋಗಿಗಳ ಪುರಾಣ ಕಾರ್ಯಕ್ರಮವನ್ನು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆಯನ್ನು ನೀಡುವರು’ ಎಂದರು.

‘ಜ.13 ಸೋಮವಾರ ದಂದು ಬೆಳಿಗ್ಗೆ 10 ಗಂಟೆಗೆ ಶಿವಪೂರದಿಂದ ಕಳಸ ಮೆರವಣಿಗೆಯು ಪುರವಂತರ ಸೇವೆ ಭಾಜ ಭಜಂತ್ರಿ ವಿವಿಧ ಕಲಾತಂಡಗಳೊಂದಿಗೆ ಅಗ್ನಿಹಾಳ ಗ್ರಾಮ ತಲುಪಿ ಅಲ್ಲಿಂದ ಸಂಗಮೇಶ್ವರ ಪಲ್ಲಕ್ಕಿ ಉತ್ಸವವು ಗುಂಡ್ಲೂರು ಮಾರ್ಗವಾಗಿ ಸಂಗಮೇಶ್ವರ ದೇವಸ್ಥಾನ ತಲುಪುವುದು. ನಂತರ 501 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆ ,ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐದು ಜನ ಸಾಧಕರಿಗೆ ಸಂಗಮ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸೋಮವಾರ ಸಂಜೆ 6 ಗಂಟೆಗೆ ಮಹಿಳೆಯರಿಂದ ಉಚ್ಚಾಯಿ ಕಾರ್ಯಕ್ರಮ ಜರಗುವುದು ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಭಜನಾ ಜರಗುವುದು ಜ.14 ರಂದು ಬೆಳಿಗ್ಗೆ ಸಂಗಮೇಶ್ವರ ಮತ್ತು ಕಾಳಿಕಾ ಮಾತೆಯ ಗರ್ತೃ ಗದ್ದುಗೆಗೆ ಕುಂಕುಮಾರ್ಚನೆ ವಿಶೇಷ ರುದ್ರಾಭಿಷಕ ನಡೆಯಲಿವೆ’ ಎಂದು ಹೇಳಿದರು.

ಬೆಳಗ್ಗೆಯಿಂದ ಸಂಜೆವರೆಗೆ ಮಕರ ಸಂಕ್ರಮಣದ ನಿಮಿತ್ಯ ರಾಜ್ಯ ಹೊರ ರಾಜ್ಯ ಜಿಲ್ಲೆ ಹಾಗೂ ಇನ್ನಿತರ ಗ್ರಾಮಗಳಿಂದ ಕೃಷ್ಣ ಭೀಮಾ ಸಂಗಮದ ನದಿಯಲ್ಲಿ ಪುಣ್ಯ ಸ್ನಾನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವರು. ಸಂಜೆ 6 ಗಂಟೆಗೆ ಸಂಗಮೇಶ್ವರರ ಮಾಹಾರಥೋತ್ಸವ ಜರಗಲಿದೆ ಈ ಜಾತ್ರಾ ಮಹೋತ್ಸವಕ್ಕೆ ವಿವಿಧ ಮಠಾಧೀಶರು ರಾಜಕೀಯ ಮುಖಂಡರು ಜನಪ್ರತಿನಿಧಿಗಳು ಸಾಹಿತಿಗಳು ವಿವಿಧ ಸಂಘಟನೆಯ ಮುಖಂಡರು ಆಗಮಿಸಲಿದ್ದಾರೆ ಸಂಗಮೇಶ್ವರ ಜಾತಮೋತ್ಸವ ಸಮಿತಿಯವರು ಜಾತ್ರೆಯ ಅಂಗವಾಗಿ ಸಕಲ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.