ADVERTISEMENT

ಮಠದಲ್ಲಿ ನಿತ್ಯ ಅನ್ನ ದಾಸೋಹಕ್ಕೆ ಸಂಕಲ್ಪ: ಶ್ರೀ

ಖಾಸಾಮಠ ಶಿಕ್ಷಣ ಸಂಸ್ಥೆಗಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 16:26 IST
Last Updated 22 ಫೆಬ್ರುವರಿ 2024, 16:26 IST
ಗುರುಮಠಕಲ್ ಪಟ್ಟಣದ ಖಾಸಾಮಠದಲ್ಲಿ ಗುರುವಾರ ಖಾಸಾಮಠದ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಹಳೇ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು
ಗುರುಮಠಕಲ್ ಪಟ್ಟಣದ ಖಾಸಾಮಠದಲ್ಲಿ ಗುರುವಾರ ಖಾಸಾಮಠದ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಹಳೇ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು   

ಗುರುಮಠಕಲ್: ಖಾಸಾಮಠದಲ್ಲಿ ಪ್ರತಿನಿತ್ಯವೂ ಅನ್ನ ದಾಸೋಹದ ವ್ಯವಸ್ಥೆ ಮಾಡಬೇಕು ಎನ್ನುವುದು ಮಠದ ಭಕ್ತರ ಹಲವು ದಿನಗಳ ಕನಸು ಮತ್ತು ಬೇಡಿಕೆಯಾಗಿದ್ದು, ಅದಕ್ಕೆ ಪೂರಕವಾಗಿ ಮಠದಲ್ಲಿ ನಿತ್ಯ ಅನ್ನ ದಾಸೋಹದ ಸಂಕಲ್ಪ ಮಾಡಲಾಗಿದ್ದು, ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ  ಸ್ವಾಮೀಜಿ ಹೇಳಿದರು.

ಪಟ್ಟಣದ ಖಾಸಾಮಠದ ರಾಜಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಖಾಸಾಮಠದ ಶಿಕ್ಷಣ ಸಂಸ್ಥೆಗಳಾದ ಅಕ್ಕಮಹಾದೇವಿ ಶಿಶು ಮಂದಿರ ಹಾಗೂ ಸಂಗಮೇಶ್ವರ ಸ್ವಾಮಿ ಸ್ಮೃತಿ ಪ್ರೌಢ ಶಾಲೆಯ 25ನೇ ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ADVERTISEMENT

ಖಾಸಾಮಠದ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ಈಗ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆಯಲ್ಲಿರುವ ಹಳೇ ಸಿಬ್ಬಂದಿಯನ್ನು ಮತ್ತು ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧೆಡೆ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಹಳೇ ವಿದ್ಯಾರ್ಥಿಗಳು, ಸಂಸ್ಥೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ವೀರಶೈವ ಸಮಾಜದ ಅಧ್ಯಕ್ಷ ನಾಗಭೂಷಣ ಆವಂಟಿ ಅವರು ಧ್ವಜಾರೋಹಣ ನೆರವೇರಿಸಿದರು. ಖಾಸಾಮಠದ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಅಖಂಡೇಶ್ವರಯ್ಯ ಹಿರೇಮಠ ಅವರು ಅಧ್ಯಕ್ಷತೆವಹಿಸಿದ್ದರು.

ಬಸವೇಶ್ವರ ಶಿಕ್ಷಣ ಸಂಸ್ಥೆಯ ಸದಸ್ಯರಾದ ನರಸರೆಡ್ಡಿ ಪಾಟೀಲ ಗಡ್ಡೆಸೂಗೂರ, ಬಸವರಾಜ ಬಣಗಾರ, ವೀರಣ್ಣ ಬೇಲಿ, ಕಿಷ್ಟಯ್ಯ ಕೋಟ್ರಿಕಿ, ಶ್ರೀನಿವಾಸ ನರ್ವಿ, ರಘುನಾಥರೆಡ್ಡಿ ಪಾಟೀಲ, ಸಂಸ್ಥೆಯ ವ್ಯವಸ್ಥಾಪಕ ಮಲ್ಲಯ್ಯಸ್ವಾಮಿ, ಮುಖ್ಯಶಿಕ್ಷಕ ಸುಧಾಕರ ಕಲಾಲ್, ಲಾಲಪ್ಪ ಯಾದವ, ನರಸರೆಡ್ಡಿ ಇಟ್ಕಾಲ, ಚಂದ್ರಶೇಖರ, ವೀರೇಂದ್ರ ನಾಯಕ್, ವಿಜಯಲಕ್ಷ್ಮಿ, ಭಾಗ್ಯಲಕ್ಷ್ಮಿ, ಮೌನಿಕಾ, ರಘುನಾಥರೆಡ್ಡಿ, ದೀಪಕ, ನರೇಂದ್ರ, ನಿಜಗುಣ, ವೀರೇಶ ನರ್ವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.