ಯರಗೋಳ: ರಾಷ್ಟ್ರೀಯ ಆಹಾರ ಭದ್ರತೆ ಯೋಜನೆ ಅಡಿ ಹತ್ತಿಕುಣಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಮೋಟನಹಳ್ಳಿ ಗ್ರಾಮದಲ್ಲಿ ಏಕದಳ ಹಾಗೂ ದ್ವಿದಳ ಧಾನ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.
ನಿವೃತ್ತ ವಿಜ್ಞಾನಿ ಡಾ.ಆರ್.ವಿ.ಪಾಟೀಲ ಅವರು ಸುರಕ್ಷಿತ ಕೀಟನಾಶಕ, ಯಾದಗಿರಿ ತೋಟಗಾರಿಕೆ ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ.ರೇವಣಪ್ಪ, ತೋಟಗಾರಿಕೆ ಬೆಳೆ, ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಕೊಟ್ರೆಶ್ ಪ್ರಸಾದ್, ಸಾವಯವ ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ರೈತರಿಗೆ ಮಾಹಿತಿ ನೀಡಿದರು.
ಖಾಸಗಿ ಸಂಸ್ಥೆಯ ವ್ಯವಸ್ಥಾಪಕ ಕುಮಾರ್ ನಾಯಕ ವಿವಿಧ ಬೆಳೆಗಳಲ್ಲಿ ಕೀಟ ಬಾಧೆ ತಡೆಗಟ್ಟುವ ಕುರಿತು ರೈತರಿಗೆ ಮಾಹಿತಿ ನೀಡಿದರು. ರವಿಂದ್ರ ಬಡಿಗೇರಾ ಆತ್ಮ ಯೋಜನೆ ಕುರಿತು ತಿಳಿಸಿದರು
ಹತ್ತಿಕುಣಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ್ ಕಂದರ್ ತೊಗರಿ ನಾಟಿ ಪದ್ಧತಿ ಕುರಿತು ಅರಿವು ಮೂಡಿಸಿದರು.
ಯಾದಗಿರಿ ಸಹಾಯಕ ಕೃಷಿ ನಿರ್ದೇಶಕಿ ಶ್ವೇತ ತಾಳೆಮರದ ಕಾರ್ಯಕ್ರಮ ಕುರಿತು ರೈತರಿಗೆ ಮಾಹಿತಿ ನೀಡಿದರು.
ಗಣಪತಿ ತಾಂತ್ರಿಕ ಅಧಿಕಾರಿ ಗಣಪತಿ, ಅರ್ಜುನ್ ಹೊಸಮನಿ, ರಾಮಚಂದ್ರ ರೈತರಾದ ಮಧುಸೂದನ್ ರೆಡ್ಡಿ, ಭೀಮಪ್ಪ ಜಕ್ಕಳ್ಳಿ, ಚಂದ್ರಪ್ಪ ಚಿಂತಕುಂಟ, ಸಾಬಣ್ಣ, ವೆಂಕಟರಮಣ, ರಾಜು ಸ್ವಾಮಿ, ಬುಗ್ಗಪ್ಪ, ಮಹೇಶ್ ಕೋಟಗೇರಾ ಹಾಗೂ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.