
ಶಹಾಪುರ: ‘ಇನ್ನೊಬ್ಬರ ಬೆಳವಣಿಗೆ ಸಹಿಸಿಕೊಳ್ಳುವ ಗುಣವುಳ್ಳ ವ್ಯಕ್ತಿ ನಿಜವಾದ ಸಾಹಿತಿ. ಕವಿ ತನ್ನ ಕಾಲಘಟ್ಟದಲ್ಲಿ ಅನುಭವಿಸಿದ ನೋವುಂಟು ಮಾಡುವ ಘಟನೆ, ಇಲ್ಲವೇ ಸಮಸ್ಯೆಗೆ ಸ್ಪಂದಿಸುವ ಗುಣ ಇರಬೇಕು. ಕವಿ ಸಮಾಜವನ್ನು ಸದಾ ಜಾಗೃತಗೊಳಿಸುತ್ತಾ ಇರುವುದರ ಜತೆಯಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಮುಖಾಮುಖಿಯಾಗಬೇಕು’ ಎಂದು ಸಾಹಿತಿ ಈಶ್ವರ ಕಟ್ಟಿಮನಿ ತಿಳಿಸಿದರು.
ತಾಲ್ಲೂಕಿನ ಭೀಮರಾಯನಗುಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಲೇಖಕ ಗೋವಿಂದರಾಜ ಸುರಪುರಕರ್ ಅವರು ಸಚಿಸಿರುವ ‘ನಕ್ಕಾವೋ ನಕ್ಷತ್ರ’ ಹನಿಕವಿತೆ ಹಾಗೂ ‘ನಕ್ಕಾವೋ ನೋವುಗಳು' ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಕವಿತೆಯ ಸಾಲುಗಳು ತನ್ನ ಬದುಕಿನಲ್ಲಿ ನಡೆದಿರುವಂತೆ, ಇಲ್ಲವೇ ಆಲೋಚನೆಗಳು, ಸಮಸ್ಯೆ, ಸವಾಲುಗಳು ಪ್ರತಿಯೊಬ್ಬ ಸಾಮಾನ್ಯ ಓದುಗನಿಗೂ ಎಲ್ಲಾ ವಿಚಾರಗಳು ನನ್ನದಾಗಿವೆ ಎಂಬ ಭಾವನೆ ಮೂಡಿದಾಗ ತಾವು ಬರೆದ ಕವಿತೆ ಸಾರ್ಥಕತೆ ಆಗುತ್ತದೆ’ ಎಂದು ತಿಳಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಸುರಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಲಭೀಮರಾಯ ದೇಸಾಯಿ, ಉಪಖಜಾನೆ ಅಧಿಕಾರಿ ಮೋನಪ್ಪ ಶಿರವಾಳ, ಕಾಲೇಜಿನ ಪ್ರಾಚಾರ್ಯ ದೇವಿಂದ್ರಪ್ಪ ಮಡಿವಾಳಕರ್, ಕೃತಿಕ ಲೇಖಕ ಗೋವಿಂದರಾಜ ಸುರಪುರಕರ್, ಸಂತೋಷ ಜುನ್ನಾ, ಭೀಮರಡ್ಡಿ ಪಾಟೀಲ, ಗುರನಾಥ ದೇಸಾಯಿ, ಗೌಡಪ್ಪಗೌಡ ಪರಿವಾಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.