ADVERTISEMENT

ಶಹಾಪುರ | ‘ಅತಿಯಾದ ಕಾಳಜಿ ಮಾನಸಿನ ಒತ್ತಡಕ್ಕೆ ದಾರಿ’

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:21 IST
Last Updated 11 ಅಕ್ಟೋಬರ್ 2025, 6:21 IST
10ಎಸ್ಎಚ್ಪಿ 1: ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷ ವಾಸುದೇವ ಕಟ್ಟಿಮನಿ ಉದ್ಘಾಟಿಸಿದರು
10ಎಸ್ಎಚ್ಪಿ 1: ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷ ವಾಸುದೇವ ಕಟ್ಟಿಮನಿ ಉದ್ಘಾಟಿಸಿದರು   

ಶಹಾಪುರ: ‘ನಾವು ಸದಾ ನಮ್ಮ ಪ್ರೀತಿಪಾತ್ರರನ್ನು ಕಾಳಜಿ ವಹಿಸುತ್ತೇವೆ. ಆದರೆ ಅತಿಯಾದ ಕಾಳಜಿ ಮಾನಸಿಕ ಅಸ್ವಸ್ಥತೆಯ ಒಂದು ಅಂಶವಾಗಬಹುದು. ಆಧ್ಯಾತ್ಮಿಕ ಒಲವು ಆರೋಗ್ಯಕ್ಕೆ ಸಹಕಾರಿಯಾಗಲ್ಲದು’ ಎಂದು ವೈದ್ಯೆ ಡಾ.ರಾಜೇಶ್ವರಿ ಎಸ್ ಗುತ್ತೇದಾರ ಹೇಳಿದರು.

ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಮಾನಸಿಕ ವಿಭಾಗದ ಚಿಕಿತ್ಸಾ ವಿಭಾಗಾಧಿಕಾರಿ ಮಲ್ಲಿಕಾರ್ಜುನ ಮ್ಯಾಗೇರಿ ಮಾತನಾಡಿ, ‘ನಕಾರಾತ್ಮಕ ಯೋಚನೆಗಳಿಂದಲೇ ಮನಸ್ಸಿನ ಆರೋಗ್ಯ ಕೆಡುತ್ತದೆ. ಕೆಲಸದಲ್ಲಿ ಏಕಾಗ್ರತೆ ಇಲ್ಲದೆ ಇರುವಾಗ ಗೊಂದಲಕ್ಕೆ ಒಳಗಾಗಿ ಆತಂಕ, ದುಗುಡ ಶುರುವಾಗುತ್ತದೆ. ಕೌಟುಂಬಿಕ ಕಲಹದ ಕುರಿತ ಸಮಸ್ಯೆಗೆ ಒತ್ತಡಕ್ಕೆ ಒಳಗಾಗದೆ ಕೆಲಸ ಮಾಡಬೇಕು. ನಿದ್ದೆ ಬರೆದೆ ಇರುವುದು, ಭಯ ಎನಿಸುವುದು, ಮನಸ್ಸು ಚಂಚಲತೆ ಹೀಗೆ ಕೆಲವು ಸಮಸ್ಯೆಗಳು ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು’ ಎಂದರು.

ADVERTISEMENT

ವೈದ್ಯ ಡಾ.ಗಂಗಾಧರ ಚಟ್ರಕಿ, ವಕೀಲರ ಸಂಘದ ಉಪಾಧ್ಯಕ್ಷ ವಾಸುದೇವ ಕಟ್ಟಿಮನಿ ಮಾತನಾಡಿದರು.

ಎಪಿಪಿ ಮರೆಪ್ಪ ಹೊಸಮನಿ, ವಕೀಲ ನಿಂಗಪ್ಪ ಗೋಷಿ, ಆಯಿಷ್ ಪರ್ವಿನ್ ಜಮಖಂಡಿ, ಪಿಎಸ್‌ಐ ಶ್ಯಾಮಸುಂದರ ನಾಯಕ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.