ADVERTISEMENT

ಶಹಾಪುರ | ದೇವರ ಹೆಸರಲ್ಲಿ ಸಮಾಜದ ಸುಲಿಗೆ: ಸಂಜಯ ಮಾಕಲ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 16:02 IST
Last Updated 26 ಆಗಸ್ಟ್ 2024, 16:02 IST
26ಎಸ್ಎಚ್ಪಿ 3: ಶಹಾಪುರ ನಗರದಲ್ಲಿ ಬಸವ ಮಾರ್ಗ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ನಡೆದ ಬಸವ ಬೆಳಕು-118 ಕಾರ್ಯಕ್ರಮವನ್ನು ಪ್ರೊ. ಸಂಜಯ ಮಾಕಲ್ ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು
26ಎಸ್ಎಚ್ಪಿ 3: ಶಹಾಪುರ ನಗರದಲ್ಲಿ ಬಸವ ಮಾರ್ಗ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ನಡೆದ ಬಸವ ಬೆಳಕು-118 ಕಾರ್ಯಕ್ರಮವನ್ನು ಪ್ರೊ. ಸಂಜಯ ಮಾಕಲ್ ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು   

ಶಹಾಪುರ: ‘ವೇದಗಳ ಮೂಲಕ ಸಮಾಜದಲ್ಲಿ ಹಲವು ಕಟ್ಟುಪಾಡು, ಕಂದಾಚಾರ, ಮೌಢ್ಯಗಳು ಹುಟ್ಟಿಕೊಂಡವು. ಕರ್ಮಗಳ ಅನುಸಾರ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಣಾಶ್ರಮ ರೂಪುಗೊಂಡಿತು. ದೇವರ ಹೆಸರಲ್ಲಿ ಸಮಾಜದಲ್ಲಿ ಸುಲಿಗೆ ಆರಂಭವಾಯಿತು. ಇಂತಹ ನಿಲುವುಗಳನ್ನು ಎಲ್ಲರೂ ಖಂಡಿಸಬೇಕಿದೆ’ ಎಂದು ಕಲಬುರಗಿಯ ಬಸವ ತತ್ವ ಪ್ರಸಾರಕ ಪ್ರೊ. ಸಂಜಯ ಮಾಕಲ ತಿಳಿಸಿದರು.

ನಗರದಲ್ಲಿ ಬಸವ ಮಾರ್ಗ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ನಡೆದ ಬಸವ ಬೆಳಕು-118 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಟ್ಟಭದ್ರರ ಹಿತಾಸಕ್ತಿಯನ್ನು ಸಂಪೂರ್ಣ ಅರಿತಿದ್ದ ಬಸವಣ್ಣನವರು, ಅವರೆಲ್ಲರ ಮೂಲ ಆಶಯವನ್ನು ಸಮಾಜದ ಎದುರು ಬಯಲುಗೊಳಿಸಿದರು. ದೇವರು, ಧರ್ಮಗಳು ಮನುಷ್ಯನ ಅಭ್ಯುದಯಕ್ಕಾಗಿ ಇದೆಯೇ ಹೊರತು ಆತನನ್ನು ಭಯಪಡಿಸುವುದಕ್ಕಲ್ಲ ಎಂಬ ಸತ್ಯವನ್ನು ಮೊದಲು ಗಟ್ಟಿಯಾಗಿ ಹೇಳಿದ್ದೆ ವಿಶ್ವಗುರು ಬಸವಣ್ಣನವರು’ ಎಂದು ಹೇಳಿದರು.

ADVERTISEMENT

ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ‘ಬಸವಾದಿ ಶರಣರ ಬದುಕು ಹಾಗೂ ವಚನಗಳು ಮಾರ್ಗದರ್ಶಿಗಳಾಗಿವೆ. ಆದರೆ ಲಿಂಗಾಯತರು, ಅವೆಲ್ಲವನ್ನು ಮರೆತು ಪಟ್ಟಭದ್ರರ ಹಿತಾಸಕ್ತಿ ಬಲಿಯಾಗುತ್ತಿರುವುದು ದುರಂತ.  ಲಿಂಗಾಯತರು ವೇದ ಶಾಸ್ತ್ರ ಆಗಮ ಪುರಾಣ ಇತ್ಯಾದಿಗಳನ್ನು ಮೀರಿ ಬೆಳೆದ ವಿಶಿಷ್ಟವಾದ ಮಾರ್ಗದವರು. ಇತಿಹಾಸದ ಪ್ರಜ್ಞೆ ಇಲ್ಲದ್ದರಿಂದ ಲಿಂಗಾಯತರು ತಮ್ಮತನ ಮರೆತಿದ್ದಾರೆ. ವಚನ ಸಾಹಿತ್ಯದ ನಿರಂತರ ಓದು ಮಾತ್ರ ನಮ್ಮನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗಬಲ್ಲುದು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ-ವೀರಶೈವ ಮಹಾಸಭೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಣ್ಣ ಆರಬೋಳ ಅವರನ್ನು ಸನ್ಮಾನಿಸಲಾಯಿತು.

ಚರಬಸವೇಶ್ವರ ಸಂಸ್ಥಾನ ಮಠದ ಬಸವಯ್ಯ ಶರಣರು, ರಾಜಶೇಖರ, ಶಿವಣ್ಣ ಇಜೇರಿ, ಅಮೋಘ ಸತ್ಯಂಪೇಟೆ, ಫಜಲುದ್ದೀನ್‌ ರಹೀಮಾನಸಾಬ, ಚಂದ್ರಶೇಖರ ಸುಬೇದಾರ, ಸಲಾದಪುರ ಶರಣಪ್ಪ, ಶಿವಯೋಗಪ್ಪ ಮುಡಬೂಳ, ಗುರುಬಸವಯ್ಯ ಗದ್ದುಗೆ, ವಿರೂಪಾಕ್ಷಿ ಸಿಂಪಿ, ಷಣ್ಮುಖ ಅಣಬಿ, ಹೊನ್ನರೆಡ್ಡಿ ವಕೀಲರು, ಶಂಭುಲಿಂಗ ದೇಸಾಯಿ, ತಿಪ್ಪಣ್ಣ ಜಮಾದಾರ, ಶರಾವತಿ ಸತ್ಯಂಪೇಟೆ, ಕಮಲಮ್ಮ ಸತ್ಯಂಪೇಟೆ, ತಿಪ್ಪಣ್ಣ ಜಮಾದಾರ, ಅಡಿವೆಪ್ಪ ಜಾಕಾ, ಬಸವರಾಜ ಅರುಣಿ, ಸಿದ್ಧಲಿಂಗಪ್ಪ ಆನೇಗುಂದಿ, ಲಕ್ಷ್ಮಣ ಲಾಳಸೇರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.