ಶಹಾಪುರ: ‘ನಗರದ ಫಿಲ್ಟರ್ ಬೆಡ್ ಕೆರೆಯಲ್ಲಿ ಸಂಗ್ರಹಿಸಿದ್ದು ಏ.18ವರೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ ನೀರನ್ನು ಮಿತವಾಗಿ ಉಪಯೋಗಿಸಬೇಕು’ ಎಂದು ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ ಮನವಿ ಮಾಡಿದ್ದಾರೆ.
‘ಎಸ್‌ಬಿಸಿ ಶಾಖಾ ಕಾಲುವೆಗೆ ಹತ್ತು ದಿನದ ಹಿಂದೆ ನೀರು ಹರಿಸಿದಾಗ ಮೂರು ದಿನ ಪೈಪ್ ಲೈನ್ ಒಡೆದು ಸಮಸ್ಯೆ ಉಂಟಾಗಿತ್ತು. ನಮ್ಮ ಸಿಬ್ಬಂದಿ ಹಗಲು ರಾತ್ರಿ ಶ್ರಮವಹಿಸಿ ದುರಸ್ತಿ ಕೆಲಸ ಮಾಡಿದ್ದು ಕಾಲುವೆ ನೀರನ್ನು ಕೆರೆಗೆ ಸೆಳೆದುಕೊಳ್ಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭೋರುಕಾ ಕಂಪನಿಯ ಹತ್ತಿರ ಒಂದಿಷ್ಟು ನೀರು ಸಂಗ್ರಹಿಸಿ ಇಟ್ಟುಕೊಂಡಿದ್ದೇವು. ಈಗ ಅದನ್ನು ಸಹ ಕೆರೆಗೆ ತುಂಬಿಸಿಕೊಳ್ಳಲಾಗುತ್ತಿದೆ. ನಮಗೆ ಏ.18ರ ನಂತರ ನೀರಿನ ಬೇಡಿಕೆ ಇದೆ. ನಗರಕ್ಕೆ ದಿನ ಬಿಟ್ಟು ದಿನ ನೀರು ಹರಿಸುತ್ತಿದ್ದೇವೆ. ಮುಂದೆ ನೀರಿನ ಲಭ್ಯತೆ ನೋಡಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ಮಾಹಿತಿ ನೀಡಿದರು.
‘ಈಗಾಗಲೇ ಮಾವಿನ ಕೆರೆ ಹಾಗೂ ನಾಗರ ಕೆರೆಗೆ ನೀರು ತುಂಬಿಸುವ ₹4.80ಕೋಟಿ ವೆಚ್ಚದ ಕಾಮಗಾರಿಯ ಪೈಪ್ ಲೈನ್ ಅಳವಡಿಸುವ ಕಾರ್ಯ ಸಾಗಿದೆ. ಫಿಲ್ಟರ್ ಬೆಡ್ ಕೆರೆಗೆ ಹೊಂದಿಕೊಂಡು ಪೈಪ್ ಲೈನ್ ಅಳವಡಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.
ಎಸ್‌ಬಿಸಿ ಕಾಲುವೆ ಮೂಲಕ ಹರಿಸಿದ ನೀರನ್ನು ಫಿಲ್ಟರ್ ಬೆಡ್ ಕೆರೆಗೆ ಸಂಗ್ರಹಿಸಲಾಗುತ್ತದೆ. ಅಲ್ಲದೆ ಭೋರುಕಾ ಕಂಪನಿ ಹತ್ತಿರ ಸಂಗ್ರಹಿಸಿದ ನೀರನ್ನೂ ಕೆರೆಗೆ ಹರಿಸಲಾಗುತ್ತದೆ. ಏ.18ವರೆಗೆ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ
-ರಮೇಶ ಬಡಿಗೇರ ಪೌರಾಯುಕ್ತ ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.