ADVERTISEMENT

ಶುಭಾಂಶು ಶುಕ್ಲಾ ಗಗನಯಾನ ಮೈಲಿಗಲ್ಲು: ಬಿ.ಬಿ.ವಡವಟ್ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 6:22 IST
Last Updated 16 ಜುಲೈ 2025, 6:22 IST
ಸೈದಾಪುರ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಬಾಹ್ಯಕಾಶ ಕೇಂದ್ರದಿಂದ ಶುಭಾಂಶು ಶುಕ್ಲಾ ಭೂಮಿಗೆ ಬರುತ್ತಿರುವುದು ಮತ್ತು ಲ್ಯಾಂಡಿಗ್ ಪ್ರಕ್ರೀಯ ದೃಶ್ಯಗಳನ್ನು ವಿದ್ಯಾರ್ಥಿಗಳ ವಿಕ್ಷಿಸಿದರು.
ಸೈದಾಪುರ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಬಾಹ್ಯಕಾಶ ಕೇಂದ್ರದಿಂದ ಶುಭಾಂಶು ಶುಕ್ಲಾ ಭೂಮಿಗೆ ಬರುತ್ತಿರುವುದು ಮತ್ತು ಲ್ಯಾಂಡಿಗ್ ಪ್ರಕ್ರೀಯ ದೃಶ್ಯಗಳನ್ನು ವಿದ್ಯಾರ್ಥಿಗಳ ವಿಕ್ಷಿಸಿದರು.   

ಸೈದಾಪುರ: ‘ಶುಭಾಂಶು ಶುಕ್ಲಾ ಅವರ ಗಗನಯಾನವು ಭಾರತದ ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇಸ್ರೊದ ಮುಂದಿನ ಯೋಜನೆಗಳ ದೃಷ್ಟಿಯಿಂದ ಶುಭಾಂಶು ಅವರ ಅನುಭವಕ್ಕೆ ಬಹಳ ಪ್ರಾಮುಖ್ಯವಿದೆ’ ಎಂದು ಮುಖ್ಯಗುರು ಬಿ.ಬಿ.ವಡವಟ್ ಅಭಿಪ್ರಾಯಪಟ್ಟರು.

ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಶುಕ್ಲಾ ಭೂಮಿಗೆ ಮರಳಿದ ಪ್ರಕ್ರಿಯೆ ದೃಶ್ಯಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ ಅವರು ಮಾತನಾಡಿದರು.

‘ಅಮೆರಿಕ, ರಷ್ಯಾ, ಚೀನಾ ನಂತರ ಭಾರತವು ಗಗನಯಾನ ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳನ್ನು ಹಾಕಿಕೊಂಡಿದೆ. ಭಾರತವು ಒಂದೆಡೆ 2027ರಲ್ಲಿ ಗಗನಯಾನದ ಕಾರ್ಯಗತಗೊಳಿಸುವ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ, 2035ಕ್ಕೆ ತನ್ನದೇ ಬಾಹ್ಯಾಕಾಶ ನಿಲ್ದಾಣವನ್ನು ಸಜ್ಜುಗೊಳಿಸುವ ಯೋಚನೆ ಹೊಂದಿದೆ. 2040ರ ಹೊತ್ತಿಗೆ ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ಹೀಗೆ ಬಾಹ್ಯಾಕಾಶ ಯಾನದ ಹಲವು ಯೋಜನೆಗಳನ್ನು ಹೊಂದಿರುವ ಭಾರತಕ್ಕೆ ಶುಭಾಂಶು ಶುಕ್ಲಾ ಅವರ ಅನುಭವವು ನೆರವಿಗೆ ಬರಲಿದೆ’ ಎಂದರು.

ADVERTISEMENT

‘‘ಆಕ್ಸಿಯಂ 4’ ಯೋಜನೆಯಲ್ಲಿ ಶುಭಾಂಶು ಅವರ ಪ್ರಯಾಣಕ್ಕಾಗಿ ಇಸ್ರೊ ₹500 ಕೋಟಿ ವೆಚ್ಚ ಮಾಡಿದೆ. ಶುಭಾಂಶು ಆಕ್ಸಿಯಂ-4 ಮಿಷನ್‍ನ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳನ್ನು ಕಳೆದಿದ್ದಾರೆ. ಅವರು 200ಕ್ಕೂ ಹೆಚ್ಚು ಬಾರಿ ಭೂಮಿಯನ್ನು ಪರಿಭ್ರಮಿಸಿದ್ದಾರೆ. 8 ದಶಲಕ್ಷ ಕಿಲೋಮೀಟರ್‌ಗೂ ಹೆಚ್ಚು ಪ್ರಯಾಣಿಸಿದಲ್ಲದೆ, ತಮ್ಮ ಮಿಷನ್‍ನಲ್ಲಿ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ’ ಎಂದರು.

ಈ ವೇಳೆ ಮುಖ್ಯಗುರು ರಾಧಾ ಸಂಗೊಳಿಗಿ, ಶಿಕ್ಷಕ ಬಸವಲಿಂಗಪ್ಪ ಕೂಡಲೂರು, ಕಾಸಿಂಬಿ ಇಮ್ತಿಯಾಜ್, ಸಂತೋಷ ದೇಸಾಯಿ, ಕಾಶಿನಾಥ ಮಡಿವಾಳ್, ಸುನೀತಾ ತಾರೇಶ, ಮಹೇಶ ಬಾಗ್ಲಿ, ದೇವೇಂದ್ರಕುಮಾರ ಬಾಗ್ಲಿ, ಚಂದ್ರಕಲಾ, ಬಸಮ್ಮ ಕಲಬುರಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಾಹ್ಯಾಕಾಶದಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಅಧ್ಯಯನ ನಡೆಸುವ ಭಾರತದ ಸಾಮರ್ಥ್ಯವನ್ನು ಶುಭಾಂಶು ಶುಕ್ಲಾ ಪ್ರಯಾಣ ಒರೆಗೆ ಹಚ್ಚಲಿದೆ
-ರಾಚಯ್ಯಸ್ವಾಮಿ, ವಿಜ್ಞಾನ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.