ADVERTISEMENT

ಶಹಾಪುರ: ಹೆಬ್ಬಾವು ರಕ್ಷಿಸಿ ಅರಣ್ಯಕ್ಕೆ ಸ್ಥಳಾಂತರ

ಗೋಗಿ (ಕೆ) ಗ್ರಾಮದ ಹತ್ತಿರ ಪ್ರತ್ಯಕ್ಷವಾಗಿದ್ದ ಉರಗ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:34 IST
Last Updated 7 ಜುಲೈ 2025, 5:34 IST
<div class="paragraphs"><p><strong>ಶಹಾಪುರ ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಅಂಬಾ ರೈಸ್ ಮಿಲ್ ಹತ್ತಿರ ಶನಿವಾರ ಹೊಸ ಸೇತುವೆ ನಿರ್ಮಾಣದ ಸ್ಥಳದಲ್ಲಿ ಹೆಬ್ಬಾವು ಪ್ರತ್ಯೇಕ್ಷ</strong></p></div>

ಶಹಾಪುರ ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಅಂಬಾ ರೈಸ್ ಮಿಲ್ ಹತ್ತಿರ ಶನಿವಾರ ಹೊಸ ಸೇತುವೆ ನಿರ್ಮಾಣದ ಸ್ಥಳದಲ್ಲಿ ಹೆಬ್ಬಾವು ಪ್ರತ್ಯೇಕ್ಷ

   

ಶಹಾಪುರ: ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಸಿಂದಗಿ-ವಿಜಯಪುರ ರಸ್ತೆಯ ಅಂಬಾ ರೈಸ್ ಮಿಲ್ ಹತ್ತಿರದ ಹೊಸದಾಗಿ ನಿರ್ಮಿಸುತ್ತಿರುವ ಸೇತುವೆ ಬಳಿಯ ಸ್ಥಳದಲ್ಲಿ ಶನಿವಾರ ಹೆಬ್ಬಾವು ಪ್ರತ್ಯಕ್ಷವಾಗಿತ್ತು.

ಗ್ರಾಮಸ್ಥರು ಉರಗ ರಕ್ಷಕ ಮಲ್ಲಯ್ಯ ಪೊಲಪಂಲ್ಲಿ ಅವರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಅರಣ್ಯ ಸಿಬ್ಬಂದಿಯ ಜೊತೆಗೂಡಿ ಆಗಮಿಸಿದರು. ತುಸು ಹೊತ್ತು ಹರಸಾಹಸ ಪಟ್ಟು ಹೆಬ್ಬಾವು ಸೆರೆ ಹಿಡಿದರು. ಅಂದಾಜು 30 ಕೆ.ಜಿ ತೂಕ ಹಾಗೂ 15 ಅಡಿ ಉದ್ದದ ಹೆಬ್ಬಾವು ಇದಾಗಿದೆ ಎಂದು ಮಲ್ಲಯ್ಯ ಮಾಹಿತಿ ನೀಡಿದರು. ನಂತರ ಹೆಬ್ಬಾವನ್ನು ಅರಣ್ಯ ಅಧಿಕಾರಿ ಶ್ರೀಧರ ಯಕ್ಷಿಂತಿ ಹಾಗೂ ಗಸ್ತು ವನಪಾಲಕ ಸುಧಾನಂದ ಹಿರೇಮಠ, ರಾಜು ಅವರ ನೆರವಿನಿಂದ ಹತ್ತಿಕುಣಿ ಗ್ರಾಮದ ಹೊರವಯಲಯದಲ್ಲಿರುವ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ADVERTISEMENT

‘ಮಲ್ಲಯ್ಯ 4ಸಾವಿರಕ್ಕೂ ಹೆಚ್ಚು ಹಾವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಅಗತ್ಯ ಪರಿಕರ ಹಾಗೂ ಉರಗ ರಕ್ಷಕ ಎಂಬ ಅಧಿಕೃತ ಪರವಾನಗಿ ಪತ್ರವನ್ನು ನೀಡುವುದರ ಜತೆಗೆ ಸೌಲಭ್ಯ ಒದಗಿಸಬೇಕು’ ಎಂದು ಜನತೆ ಅರಣ್ಯ ಸಚಿವರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.