ಕ್ಯಾತನಾಳ(ಸೈದಾಪುರ): ಸಮೀಪದ ಕ್ಯಾತನಾಳ ಗ್ರಾಮದ ಇಂದಿರಾ ನಗರದಲ್ಲಿರುವ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳವರೆಗೆ ನಡೆದ ಪೂಜೆ ಸಂಪನ್ನಗೊಂಡಿತು.
ಭಕ್ತಾಧಿಗಳು ಬೆಳಿಗ್ಗೆಯಿಂದಲೇ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಪ್ರಸಾದ ತಯಾರಿಯಲ್ಲಿ ತೊಡಗಿಕೊಂಡಿದ್ದರು. ಜೊತೆಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ದೇವಸ್ಥಾನದ ಅರ್ಚಕ ಬೂದೆಯ್ಯ ಸ್ವಾಮಿ ಗ್ರಾಮದ ಭಕ್ತರೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ಭಕ್ತಾದಿಗಳಿಗಾಗಿ ಅನ್ನ ಸಂತರ್ಪಣೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗ್ರಾಮದ ಹಿರಿಯರಾದ ಬಾಬು ನಾಯಕ, ಬಸವಲಿಂಗಪ್ಪ ವಡಿಗೇರಿ, ಗ್ರಾ.ಪಂ ಮಾಜಿ ಸದಸ್ಯ ಶರಣು, ಗೋಪಾಲ ದಾಸರ್, ಮಲ್ಲಿಕಾರ್ಜುನ ಅರಿಕೇರಕರ್, ನರಸಿಂಗ ಕೋರೆ, ಸತೀಶ ದಾಸರ್, ದೇವು ಬಾಗ್ಲಿ, ಮಹೇಶ, ಉಸ್ಮಾನ್ ಚೌದ್ರಿ, ಮಲ್ಲಮ್ಮ ಟೈಲರ್, ಮಾರೆಪ್ಪ ನಾಯಕ್, ಅನೀಲ ಕುಂಬಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.